ಬೆಂಗಳೂರು: ರಾಜ್ಯದಾದ್ಯಂತ ನಾಳೆ ಸೆಪ್ಟಂಬರ್ 14ರಂದು ರಾಜ್ಯ ಸರಕಾರ ಹಿಂದಿ ದಿವಸ್ ಆಚರಿಸಲು ನಿರ್ಧರಿಸಿದೆ. ಸರಕಾರದ ಈ ನಡೆಯನ್ನು ಖಂಡಿಸಿರುವ ಜೆಡಿಎಸ್ ನಾಳೆ ಬುಧವಾರ ಪ್ರತಿಭಟನೆ ನಡೆಸೋದಾಗಿ ಹೇಳಿದೆ.
ನಾಳೆ ಬುಧವಾರ ಮಧ್ಯಾಹ್ನ 3:00 ಘಂಟೆಗೆ ಪಕ್ಷದ ಕಚೇರಿ ಜೆಪಿ ಭವನದ ಮುಂಭಾಗದ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುಧ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ. ಈ ಪ್ರತಿಭಟನೆಯನ್ನು ಮಾಜಿ ಕೇಂದ್ರ ಸಚಿವರಾದ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ನಡೆಯಲಿದ್ದು, ಪಕ್ಷದ ಎಲ್ಲಾ ಮುಖಂಡರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು/ಮಾಜಿ ಶಾಸಕರು ಕ್ಷೇತ್ರ ಸಮಿತಿ ಅಧ್ಯಕ್ಷ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
PublicNext
13/09/2022 03:43 pm