ಹುಕ್ಕೇರಿ: ಉಮೇಶ ಕತ್ತಿ ಅವರ 40 ವರ್ಷಗಳ ರಾಜಕೀಯ ಜೀವನದ ಕುರಿತು ಪುಸ್ತಕ ಹೊರ ಬರಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಅವರು ಗುರುವಾರ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಉಮೇಶ ಕತ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದರು. ಶಾಸಕರಾಗಿ, ಸಚಿವರಾಗಿ ಉಮೇಶ ಕತ್ತಿ ಮಾಡಿದ ಕೆಲಸ, ಅವರ ದೂರದೃಷ್ಟಿ ಎಲ್ಲರಿಗೂ ಗೊತ್ತಾಗಬೇಕಾದರೆ ಅವರ 40 ವರ್ಷಗಳ ರಾಜಕೀಯ ಜೀವನ ಕುರಿತು ಪುಸ್ತಕ ಹೊರ ತರಬೇಕು ಎಂದರು.
ಕತ್ತಿ ಅವರು ಪಕ್ಷ ಕಟ್ಟಲು, ರಾಜ್ಯದ ಅಭಿವೃದ್ದಿ ಕುರಿತು ಸಾಕಷ್ಟು ಸಲಹೆ ನೀಡುತ್ತಿದ್ದರು. ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ನೇರ ನುಡಿಯ ಬಿಂದಾಸ್ ವ್ಯಕ್ತಿತ್ವ ಕತ್ತಿ ಅವರದ್ದು ಎಂದರು.
ಇದಕ್ಕೂ ಮೊದಲು ಅರುಣ ಸಿಂಗ್, ಸಚಿವರಾದ ಡಾ.ಕೆ.ಸುಧಾಕರ್, ಮುನಿರತ್ನ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್ ಅವರು ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಹೋದರ ರಮೇಶ ಕತ್ತಿ, ಉಮೇಶ ಕತ್ತಿ ಪುತ್ರ ನಿಖಿಲ್, ರಮೇಶ ಕತ್ತಿ ಪುತ್ರರಾದ ಪೃಥ್ವಿ, ಪವನ್, ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
PublicNext
08/09/2022 09:26 pm