ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು ಮೇಯರ್, ಉಪಮೇಯರ್ ಕಮಲದ ತೆಕ್ಕೆಗೆ : JDSಗೆ ಶಾಕ್

ಮೈಸೂರು : ಮೈಸೂರು ಮೇಯರ್ ಪಾಲಿಕೆಯ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಸಂಪೂರ್ಣ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮೇಯರ್ ಉಪ ಮೇಯರ್ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿವೆ.ಹೌದು ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪ್ರಕ್ರಿಯೆ ಮುಗಿದಿದ್ದು ಬಿಜೆಪಿಯ ಅಭ್ಯರ್ಥಿ ಶಿವಕುಮಾರ್ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಬಿಜೆಪಿಗೆ ಬೆಂಬಲ ಸೂಚಿಸಿದರೂ ಉಪಮೇಯರ್ ಪಟ್ಟದಿಂದ ವಂಚಿತವಾಗಿದೆ.

ಮೇಯರ್ ಸ್ಥಾನಕ್ಕಾಗಿ ಮೂರು ಪಕ್ಷಗಳಿಂದ ತೀವ್ರ ಪೈಪೋಟಿ ನಡೆದಿತ್ತು. ಕೊನೆಯ ಹಂತದವರೆಗೂ ಯಾವುದೇ ಪಕ್ಷಗಳು ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ಬಿಜೆಪಿಗೆ ಮೈಸೂರಿನ ಮಹಾಪೌರ ಪಟ್ಟ ದೊರೆತಿದೆ.ನಗರದ 47ನೇ ವಾರ್ಡ್ನ ಸದಸ್ಯ ಶಿವಕುಮಾರ್ ಮೇಯರ್ ಆಗಿ ನೇಮಕಗೊಂಡಿದ್ದಾರೆ. ಆದರೆ ಉಪಮೇಯರ್ ಆಗಬೇಕಿದ್ದ ಜೆಡಿಎಸ್ ನ ರೇಷ್ಮಾ ಉಪಮೇಯರ್ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಬಿಜೆಪಿಯ ಅಭ್ಯರ್ಥಿ ನಾಗೇಶ್ ಆಯ್ಕೆಯಾಗಿದ್ದಾರೆ. ಎರಡನೇ ಬಾರಿಗೂ ಬಿಜೆಪಿ ಅಭ್ಯರ್ಥಿಯೇ ಮೇಯರ್ ಆಯ್ಕೆಯಾಗುವುದರ ಜೊತೆಗೆ ಉಪಮೇಯರ್ ಸ್ಥಾನವನ್ನು ದಕ್ಕಿಸಿಕೊಂಡಿದೆ.

ಚುನಾವಣಾ ಒಳಮೈತ್ರಿಯಲ್ಲಿ ಜೆಡಿಎಸ್ ಉಪಮೇಯರ್ ಸ್ಥಾನಕ್ಕೆ ಒಪ್ಪಿಕೊಂಡಿತ್ತು. ಅದರಂತೆ ಉಪ ಮೇಯರ್ ಚುನಾವಣೆಗೆ ಜೆಡಿಎಸ್ ನ ರೇಷ್ಮಾ ಬಾನು ನಾಮಪತ್ರ ಸಲ್ಲಿಸಿದ್ದರು. ಆದರೆ ಉಪ ಮೇಯರ್ ಸ್ಥಾನ ಬಿಸಿಎಗೆ ಮೀಸಲಿಡಲಾಗಿತ್ತು. ಆದರೆ ರೇಷ್ಮಾ ಬಾನು ನಾಮಪತ್ರ ಸಲ್ಲಿಸುವ ವೇಳೆ ಬಿಸಿಎ ಸರ್ಟಿಫಿಕೇಟ್ ಸಲ್ಲಿಸದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡು ಉಪ ಮೇಯರ್ ಸ್ಥಾನ ಕೈತಪ್ಪಿದೆ.

Edited By : Nirmala Aralikatti
PublicNext

PublicNext

06/09/2022 06:41 pm

Cinque Terre

39.95 K

Cinque Terre

12