ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಯೊಬ್ಬ ಕಾರ್ಯಕರ್ತನೂ ಬಿಜೆಪಿ ಮಾಲೀಕ: ಮೋದಿ, ಶಾ, ನಡ್ಡಾ ಕುಟುಂಬದವರು ಆಗಲು ಸಾಧ್ಯವಿಲ್ಲ: ಸಿ. ಟಿ. ರವಿ

ದಾವಣಗೆರೆ: ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ಮಾಲೀಕ. ಕಾರ್ಯಕರ್ತರೇ ಮಾಲೀಕರಾಗಿರುವ ಪಕ್ಷ ಯಾವುದೆಂದರೆ ಅದೂ ಬಿಜೆಪಿ ಮಾತ್ರ. ಈ ಕಾರಣದಿಂದ ಬೂತ್ ಕಮಿಟಿ ಅಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರಾಗಬಹುದು. ಹಾಗಾಗಿ ನಾವೆಲ್ಲರೂ ಈ ಪಕ್ಷದ ಮಾಲೀಕರು. ಪಕ್ಷವನ್ನು ಬಲಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ನಗರದ ಪೂಜಾ ಇಂಟರ್ ನ್ಯಾಷನಲ್ ಹೊಟೇಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಎಸ್.ಟಿ ಮೋರ್ಚಾ ವತಿಯಿಂದ ಆಯೋಜಿಸಿದ್ದ ಎಸ್.ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಹಾಗೂ 3 ದಿನಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಾಮಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯರು ನಮ್ಮ ಸಂಸ್ಥಾಪಕರು. ಅವರ ಮಕ್ಕಳು ಮಾಲೀಕರಾಗಿದ್ದಾರಾ? ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ ಸರ್ವಶ್ರೇಷ್ಠ ನಾಯಕರು ಅವರ ಕುಟುಂಬದವರು ನಮ್ಮಲ್ಲಿ ಮಾಲೀಕರಿದ್ದಾರಾ? ನರೇಂದ್ರ ಮೋದಿ, ಅಮಿತ್ ಶಾ, ಜೆ. ಪಿ. ನಡ್ಡಾ ಕುಟುಂಬದವರು ಸಹ ಮಾಲೀಕರು ಆಗಲು ಸಾಧ್ಯ ಇಲ್ಲ ಎಂದು ಅಭಿಪ್ರಾಯಪಟ್ಟರು.

ಜಾತಿ ಬಿಟ್ಟು ಜೆಡಿಎಸ್ ಬದುಕುತ್ತಾ?, ಜೆಡಿಎಸ್ ನ ಆತ್ಮವೇ ಜಾತಿ. ಕಾಂಗ್ರೆಸ್ ನ ಆತ್ಮ ಪರಿವಾರ. ಒಂದೇ ಪರಿವಾರಕ್ಕೆ ಜೋತು ಬಿದ್ದಿರುವ ಆ ಪಾರ್ಟಿಯೂ ಬದುಕಲ್ಲ. ಬಿಜೆಪಿ ಹಾಗಲ್ಲ. ಬಿಜೆಪಿ ಆತ್ಮ ರಾಷ್ಟ್ರವಾದ, ಹಿಂದುತ್ವ. ಜಾತಿ, ಕುಟುಂಬ ರಾಜಕಾರಣ ಆತ್ಮ ಅಲ್ಲ ಎಂದರು.

Edited By : Nagesh Gaonkar
PublicNext

PublicNext

03/09/2022 06:48 pm

Cinque Terre

91.47 K

Cinque Terre

7

ಸಂಬಂಧಿತ ಸುದ್ದಿ