ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಶರಣರ ವಿರುದ್ಧದ ಷಡ್ಯಂತ್ರವನ್ನ ಒಟ್ಟಾಗಿ ಎದುರಿಸೋಣ, ಶ್ರೀಗಳ ಪರ ನಿಲ್ಲೋಣ''

ದಾವಣಗೆರೆ: ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಶರಣರು ಸಂಕಷ್ಟದಲ್ಲಿದ್ದಾರೆ. ಷಡ್ಯಂತ್ರ ಮಾಡಿ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾವೆಲ್ಲರೂ ಕೇವಲ ಮಾತನಾಡಿದರೆ ಸಾಲದು. ಶ್ರೀಗಳ ಪರ ನಿಲ್ಲೋಣ. ಇದರ ಹಿಂದಿರುವ ಪಟ್ಟಭದ್ರಾ ಹಿತಾಸಕ್ತಿಗಳಿಗೆ ತಕ್ಕ ಪಾಠ ಕಲಿಸೋಣ. ನೈತಿಕ ಬೆಂಬಲ ನೀಡುವ ಜೊತೆಗೆ ಶ್ರೀಗಳಿಗಾಗಿ ಹೋರಾಟ ನಡೆಸೋಣ.

ಇದು ದಾವಣಗೆರೆಯ ಜಯದೇವ ವೃತ್ತದಲ್ಲಿ ಸರ್ವ ಸಮಾಜದ ಮುರುಘಾಮಠದ ಅಭಿಮಾನಿಗಳ ನೇತೃತ್ವದಲ್ಲಿ ಮುರುಘಾಶರಣರ ಬಂಧನ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕೇಳಿ ಬಂದ ನುಡಿಗಳು. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಮಾಜದ ಮುಖಂಡರು, ರಾಜಕೀಯ ನಾಯಕರು, ಸಂಘಟನೆಗಳ ಪ್ರಮುಖರು, ಮಠದ ಪ್ರಮುಖರು ಮಾತನಾಡಿ ಶ್ರೀಗಳ ಪರ ನಿಂತು ನ್ಯಾಯಕ್ಕಾಗಿ ಹೋರಾಟ ನಡೆಸೋಣ. ಬೆಂಬಲಿಸೋಣ, ಬಂಧಮುಕ್ತರಾಗುವವರೆಗೆ ವಿರಮಿಸುವುದು ಬೇಡ ಎಂಬ ಸಂಕಲ್ಪ ತೊಟ್ಟರು.

ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮುರುಘಾ ಶರಣರು ಬಂಧನವಾಗಿರುವುದು ಕರಾಳ, ನೋವಿನ, ಕಷ್ಟವಾದಂಥದ್ದು. ಭಕ್ತಸಮೂಹವೇ ದುಃಖದಲ್ಲಿದೆ. ಕೆಲ ದುಷ್ಕರ್ಮಿಗಳು ಮಾಡಿರುವ ದೊಡ್ಡ ಪಿತೂರಿ ಇದು. ಮೊದಲು ಇವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಮುರುಘಾಶರಣರ ಜನಪ್ರಿಯತೆ ಸಹಿಸದೇ, ಜನಾನುರಾಗಿ ಕೈಗೊಂಡ ಕಾರ್ಯಗಳನ್ನು ಅರಗಿಸಿಕೊಳ್ಳಲಾಗದೇ ಕಳಂಕರಹಿತವಾದ ಆರೋಪ ಹೊರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Edited By : Manjunath H D
PublicNext

PublicNext

02/09/2022 07:40 pm

Cinque Terre

61.45 K

Cinque Terre

1

ಸಂಬಂಧಿತ ಸುದ್ದಿ