ಕನಕಪುರ: ಸೋಮವಾರ ಸುರಿದ ಭಾರೀ ಮಳೆಗೆ ಹಾರೋಹಳ್ಳಿ ಭಾಗಶಃ ಮುಳುಗಿದ ಪ್ರದೇಶಗಳಿಗೆ ಸ್ಥಳೀಯ ಶಾಸಕಿ ಅನಿತಾಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಶಾಸಕಿ ಹಾರೋಹಳ್ಳಿ ಪ್ರದೇಶದಲ್ಲಿ ಎಷ್ಟು ಅನಾಹುತವಾಗಿದೆ ಎಂದು ನಾನು ಎಣಿಸಿರಲಿಲ್ಲ ಎಲ್ಲರಿಗೂ ಪರಿಹಾರ ನೀಡಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಹಾಗೂ ಈ ಘಟನೆ ನಡೆದಿರುವುದು ದುರ್ದೈವ ಎಂದು ವಿಷಾದ ವ್ಯಕ್ತಪಡಿಸಿದರು. ಹಾರೋಹಳ್ಳಿ ಆಸ್ಪತ್ರೆಗೆ ಶಾಶ್ವತ ಪರಿಹಾರ ಕಲ್ಪಿಸಲು ನಮ್ಮ ಮುಖಂಡರಿಗೆ ಎರಡು ಎಕರೆ ಜಾಗ ನೋಡಲು ಹೇಳಿದ್ದೇನೆ ಒಂದು ಉತ್ತಮ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ, ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ವಿಎಸ್ ಎಸ್ ಎನ್ ಅಧ್ಯಕ್ಷ ಸೋಮಶೇಖರ್, ತಾಪಂ ಮಾಜಿ ಸದಸ್ಯರಾದ ಕೆ.ಎನ್.ರಾಮು, ಶಿಲ್ಪಾಶಿವಾನಂದ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನವೀನಕುಮಾರ್ ಇತರರು ಇದ್ದರು.
ವರದಿ : ಎಲ್.ಜಿ. ಜಯರಾಮನಾಯಕ್ ಪಬ್ಲಿಕ್ ನೆಕ್ಸ್ಟ್ ಕನಕಪುರ
PublicNext
31/08/2022 07:03 pm