ಬೆಂಗಳೂರು: ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸಿದ್ದರಾಮಯ್ಯ, ಡಿಕೆಶಿ ಹಾಗೂ ರಣದೀಪ್ ಸುರ್ಜೇವಾಲಾ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಡಿ.ಕೆ ಶಿವಕುಮಾರ್, ವಿಷಯದ ಹಾದಿ ತಪ್ಪುತ್ತಿದೆ ಎಂಬಂತೆ ಕಣ್ಸನ್ನೆ ಮೂಲಕ ಸುರ್ಜೇವಾಲಾ ಗಮನಕ್ಕೆ ತಂದಿದ್ದಾರೆ. ಆಗ ಚೀಟಿ ಬರೆದು ಕೂಡಲೇ ಸಿದ್ದರಾಮಯ್ಯ ಈ ವಿಚಾರ ಅಲ್ಲಿಗೆ ಬಿಟ್ಟು ಬೇರೆ ವಿಷಯ ಮಾತಾಡುವಂತೆ ಸೂಚಿಸಿದ್ದಾರೆ. ಚೀಟಿ ನೋಡಿದ ಸಿದ್ದರಾಮಯ್ಯ ಅಲ್ಲಿಂದಲೇ ಆ ವಿಚಾರ ಕೈ ಬಿಟ್ಟು ಭಾಷಣ ಮುಗಿಸಿದ್ದಾರೆ.
ಈ ಪ್ರಸಂಗಕ್ಕೆ ಇಂದು ಕಾಂಗ್ರೆಸ್ ಪತ್ರಿಕಾಗೋಷ್ಟಿ ಸಾಕ್ಷಿಯಾಗಿದೆ.
PublicNext
29/08/2022 11:11 pm