ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರದ್ದು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಯುವತಿಯು 'ಸಂಸದರು ತನಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ವಾಟ್ಸಾಪ್‌ನಲ್ಲಿ ಚಾಟಿಂಗ್ ಮಾಡಿದರು’ ಎಂದು ಬೇರೊಬ್ಬರಿಗೆ ವಿವರಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಯುವತಿ ಸಂಗತಿಗಳನ್ನು ಅಶ್ಲೀಲ ಪದಗಳೊಂದಿಗೆ ವಿವರಿಸಿದ್ದು, 'Indian national congress boliyar' ಹೆಸರಿನ ಫೇಸ್‌ಬುಕ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ.
ಸದ್ಯ ವೈರಲ್ ಆದ ವಿಡಿಯೋಗೆ ಬಿಜೆಪಿಗರು ಕಾಂಗ್ರೆಸ್‌ನವರು ಬೇಕಂತಲೇ ಸಂಸದರ ತೇಜೋವಧೆಗಾಗಿ ಯುವತಿಯೋರ್ವಳಿಂದ ಹೀಗೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
PublicNext
24/08/2022 05:47 pm