ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾವು ಜೊಲ್ಲೆಗೆ ಹುಟ್ಟಿಲ್ಲಾ: ವಿವಾದಾತ್ಮಕ ಹೇಳಿಕೆ ಕೊಟ್ಟ ನಲಪಾಡ್

ಬೆಂಗಳೂರು: ನಾವು ಕಾಂಗ್ರೆಸ್ ಪಕ್ಷದವರು, ಗಾಂಧೀಜಿ ತತ್ವ ಅನುಸರಿಸುತ್ತಿರುವವರೇ ಹೊರತು ನಾವು ಶಶಿಕಲಾ ಜೊಲ್ಲೆಗೆ ಹುಟ್ಟಿದವರಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಸಿದ್ದರಾಮಯ್ಯ ಅವರತ್ತ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಲಪಾಡ್, ಬಿಜೆಪಿಯವರು ಊರುಬಿಟ್ಟು ಓಡಿಹೋಗುವಂತೆ ಮಾಡುತ್ತೇವೆ. ರಾಜ್ಯದ ಎಲ್ಲೆಡೆ ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ಸಚಿವರಿಗೂ ಮೊಟ್ಟೆ ಕಳುಹಿಸಿ ಕೊಡುತ್ತೇವೆ. ನಾವು ಗಾಂಧೀಜಿ ಅವರ ಅಹಿಂಸಾ ತತ್ವದಿಂದ ಸೋಲಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.

ಆರ್ ಎಸ್ ಎಸ್ ನವರ ಜೀವಮಾನ, ಇತಿಹಾಸ, ಕ್ಷಮಾಪಣೆ ಕೇಳಿ ಬಂದವರು. ಮೊಟ್ಟೆ ಎಸೆದರೆ ನಾವು, ಸಿದ್ದರಾಮಯ್ಯ ಹೆದರುವುದಿಲ್ಲ, ನಮ್ಮ ಹೋರಾಟ ಉಗ್ರ ಆಗುವ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕ್ಷಮಾಪಣೆ ಕೇಳಬೇಕು ಎಂದಿದ್ದಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜೊಲ್ಲೆ ವಿರುದ್ಧ ಮೊಟ್ಟೆ ಖರೀದಿಯಲ್ಲಿ ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿಬಂದಿತ್ತು.

Edited By : Nirmala Aralikatti
PublicNext

PublicNext

19/08/2022 08:22 pm

Cinque Terre

150.35 K

Cinque Terre

51

ಸಂಬಂಧಿತ ಸುದ್ದಿ