ತಿರುಪತಿ: ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಟಿ.ಟಿ.ಡಿ ಅಧ್ಯಕ್ಷ ಸುಬ್ಬಾರೆಡ್ಡಿರನ್ನು ಭೇಟಿ ಮಾಡಿದರು. ಈ ವೇಳೆ ಮಾನ್ಯ ಬಿಡಿಎ ಅಧ್ಯಕ್ಷ, ಟಿ.ಟಿ.ಡಿ ಸದಸ್ಯರಾದ ಎಸ್.ಆರ್ ವಿಶ್ವನಾಥ್ ಜೊತೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದರು. ಈ ವೇಳೆ ಟಿ.ಟಿ.ಡಿ ಅಧ್ಯಕ್ಷ ಸುಬ್ಬಾರೆಡ್ಡಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ತಿಮ್ಮಪ್ಪನ ಪ್ರತಿಮೆಗಳ ಉಡುಗೊರೆ ನೀಡಿದರು.
ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ನಂತರ ಅವರ ಅಸ್ತಿತ್ವ ಮುಗಿದೇಹೋಯ್ತು ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಯಡಿಯೂರಪ್ಪರವರ ಶಕ್ತಿಯನ್ನ ಅರಿತಿರುವ ಬಿಜೆಪಿ ಹೈಕಮ್ಯಾಂಡ್ ಇದೀಗ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾನ್ನಾಗಿಸಿ ಕೇಂದ್ರದ ಜವಾಬ್ದಾರಿ ನೀಡಿದೆ. ಇದೆ ಸಂಭ್ರಮದಲ್ಲಿ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿ ದರ್ಶನ ಪಡೆದಿದ್ದು ವಿಶೇಷವಾಗಿದೆ.
PublicNext
18/08/2022 10:45 pm