ಚಂಡೀಗಢ: ಪಂಜಾಬ್ ಆರೋಗ್ಯ ಸಚಿವ ಚೇತನ್ ಸಿಂಗ್ ಚೌರಮಜ್ರಾ ಅವರು ಕುಲಪತಿಯೊಬ್ಬರನ್ನು ಕೊಳಕು ಹಾಸಿಗೆ ಮೇಲೆ ಮಲಗಿಸಿದ್ದರು. ಈ ಮೂಲಕ ಎಲ್ಲರೆದುರು ಅವರನ್ನು ಅಪನಕ್ಕೆ ಒಳಗಾಗುವಂತೆ ಮಾಡಿದ್ದರು.
ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ರಾಜ್ ಬಹುದ್ದೂರ್ ಅವರೇ ಅಪಮಾನಕ್ಕೆ ಈಡಾದವರು. ಈಗ ಡಾ. ರಾಜ್ ಬಹುದ್ದೂರ್ ಅವರು ತಮ್ಮ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ನೀಡಿದ್ದಾರೆ.
ವಿಶ್ವವಿದ್ಯಾಲಯ ಪರಿಶೀಲನೆಗಾಗಿ ಇತ್ತೀಚೆಗಷ್ಟೇ ಆರೋಗ್ಯ ಸಚಿವರು ಬಂದಿದ್ದರು. ಈ ವೇಳೆ ಕೊಳಕಾದ ಹಾಸಿಗೆಗಳನ್ನು ಕಂಡ ಅವರು ಆಕ್ರೋಶಿತರಾಗಿ ಕುಲಪತಿಯನ್ನು ಅದರ ಮೇಲೆ ಮಲಗಿಸಿದ್ದರು. ಇದರಿಂದ ಕುಲಪತಿ ಡಾ. ರಾಜ್ ಬಹುದ್ದೂರ್ ತೀವ್ರ ಮುಜುಗರಕ್ಕೆ ಈಡಾಗಿದ್ದರು. 'ನನಗೆ ಇಲ್ಲಿರಲು ಸಾಧ್ಯವಾಗುತ್ತಿಲ್ಲ' ಎಂದು ಕುಲಪತಿ ಕಾರಣ ನೀಡಿದ್ದಾರೆ ಎನ್ನಲಾಗಿದೆ.
PublicNext
12/08/2022 08:26 am