ಪಾಟ್ನಾ: ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಹೊಸ ಸರ್ಕಾರ ರಚಿಸಲು ವೈರಿಯಾಗಿ ಮಾರ್ಪಟ್ಟಿದ್ದ ತಮ್ಮ ಹಳೆಯ ಸ್ನೇಹಿತ ಲಾಲೂ ಪ್ರಸಾದ್ ಯಾದವ್ ಅವರ ಪಕ್ಷದ ಜೊತೆ ಮತ್ತೆ ಒಂದಾಗಿದ್ದಾರೆ.ಸದ್ಯ ಹಳೆಯ ದೋಸ್ತಿ ಒಂದಾದ ಬೆನ್ನಲ್ಲೇ ಲಾಲೂ-ನಿತೀಶ್ ಪಕ್ಷಗಳ ಮೈತ್ರಿ ಕುರಿತಂತೆ ಹಲವು ಮೀಮ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹೌದು ನಿತೀಶ್ ಕುಮಾರ್ ಅಂತಿಮವಾಗಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು ಮತ್ತೆ ತಮ್ಮ ಹಳೆಯ ದೋಸ್ತಿ ಆರ್ ಜೆಡಿ ಜೊತೆಗೆ ಕೈ ಕುಲುಕಿದ್ದಾರೆ.ಆ ಮೂಲಕ ನಿತೀಶ್ ಕುಮಾರ್ 8ನೇ ಬಾರಿಗೆ ಬಿಹಾರದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ.
ಹಲವು ರಾಜಕೀಯ ಏರಿಳಿತ ಕಂಡಿದ್ದ ನೀತಿಶ್ ಕುಮಾರ್ 2014 ಸಿಎಂ ಆಗಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ಪರಾಭಾವ ಗೊಂಡು 2015 ರಲ್ಲಿ ಆರ್ ಜೆಡಿ ಹಾಗೂ ಕಾಂಗ್ರೆಸ್ ಜೊತೆಗೆ ಮಹಾಘಟಬಂಧದ ಮೂಲಕ ಅಧಿಕಾರ ಹಿಡಿದು. ಮತ್ತೆ 2017 ರ ಮಹಾಘಟ್ ಬಂಧನದನದ ಸರ್ಕಾರಕ್ಕೆ ರಾಜೀನಾಮೆ ನೀಡಿ ಮರುದಿನವೆ ಬಿಜೆಪಿಯ ಬೆಂಬಲದೊಂದಿಗೆ ಸಿಎಂ ಆಗಿದ್ದರು.
ಸದ್ಯ ಲಾಲು ಪ್ರಸಾದ್ ಯಾದವ್ ಹಾಗೂ ನೀತಿಶ್ ಕುಮಾರ್ ಮತ್ತೆ ಒಂದಾಗಿರುವದರಿಂದ ಅವರ ಹಳೆಯ (2020)ರ ವಿಡಿಯೋ ಒಂದು ಪುನಃ ವೈರಲ್ ಆಗಿದೆ. 1951 ರ 'ಕಿಸ್ಮತ್ ಕಿ ಹವಾ' ಹಾಡಿನ ಹಿನ್ನಲೆಯಲ್ಲಿ ಮೀಮ್ಸ್ ಮಾಡಲಾಗಿದೆ. ಈ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.
PublicNext
10/08/2022 07:59 pm