ಮೈಸೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ 'ಹರ ಘರ್ ತಿರಂಗಾ' ಅಭಿಯಾನಕ್ಕೆ ಕರೆ ನೀಡಿದೆ. ಈ ಅಭಿಯಾನವನ್ನು ಟೀಕಿಸುವ ಭರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಾಷ್ಟ್ರಧ್ವಜದ ಬಣ್ಣವನ್ನು ತಪ್ಪಾಗಿ ಹೇಳಿದ್ದಾರೆ. ಕೇಸರಿ, ಬಿಳಿ, ಹಸಿರು ಎಂದು ಹೇಳುವ ಬದಲಾಗಿ ಕೆಂಪು, ಬಿಳಿ, ಹಸಿರು ಎಂದು ತಪ್ಪಾಗಿ ಉಚ್ಛರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯಿಂದ ಕೆರೆ ನೀಡಿರುವಂತ ಹರ್ ಘರ್ ತಿರಂಗಾ ಅಭಿಯಾನದ ವಿರುದ್ಧ ಬಗ್ಗೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಇದೇ ವೇಳೆ ರಾಷ್ಟ್ರಧ್ವಜದ ಬಣ್ಣ ಹೇಳುವಾಗ ಸಿದ್ದರಾಮಯ್ಯ ಯಡವಟ್ಟು ಮಾಡಿಕೊಂಡಿದ್ದಾರೆ.
ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವು ಕಾಂಗ್ರೆಸ್ ನಿಂದಲೇ ಆಗಿದ್ದು. ಈಗ ಬಿಜೆಪಿಯವರು ದೇಶವೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಗಾಂಧೀಜಿ, ತಿಲಕರು ಮಾಡಿದಂತ ತ್ಯಾಗ, ಬಲಿದಾನದ ಸಂಕೇತ ಸ್ವಾತಂತ್ರ್ಯವಾಗಿದೆ. ತ್ಯಾಗ, ಶಾಂತಿ, ಸಮೃದ್ಧಿ ಈ ದೇಶದ ರಾಷ್ಟ್ರಧ್ವಜವಾಗಿದೆ. ಇದೇ ಧ್ವಜವನ್ನು ವೀರ ಸಾರ್ವಕರ್ ವಿರೋಧ ಮಾಡಿದ್ದರು ಎನ್ನುತ್ತಲೇ ಕೇಸರಿ, ಬಿಳಿ ಹಸಿರಿನ ಬಣ್ಣದ ಧ್ವಜ ಎನ್ನುವ ಬದಲಾಗಿ, ಕೆಂಪು, ಬಿಳಿ, ಹಸಿರು ಎಂಬುದಾಗಿ ತಪ್ಪಾಗಿ ಹೇಳಿದ್ದಾರೆ.
PublicNext
07/08/2022 11:00 pm