ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕರಾಗಿ ಮರಳಿದ್ದಾರೆ.
ಮರಾಠಿ ಪತ್ರಿಕೆಯ ಪ್ರಿಂಟ್ ಲೈನ್ ಶುಕ್ರವಾರ ಉದ್ಧವ್ ಅವರ ಹೆಸರನ್ನು ಸಂಪಾದಕ ಮತ್ತು ಪಕ್ಷದ ಸಂಸದ ಸಂಜಯ್ ರಾವುತ್ ಅವರ ಹೆಸರನ್ನು ಕಾರ್ಯಕಾರಿ ಸಂಪಾದಕ ಎಂದು ಪ್ರಕಟಿಸಿದೆ. 2019ರಲ್ಲಿ ಉದ್ಧವ್ ಅವರು ರಾಜ್ಯದ ಮುಖ್ಯಮಂತ್ರಿಯಾದಾಗ ಸಂಪಾದಕ ಹುದ್ದೆಯನ್ನು ತೊರೆದಿದ್ದರು.
'ಸಾಮ್ನಾ' ಮರಾಠಿ ದೈನಿಕವಾಗಿದ್ದರೆ, 'ದೊಪಹರ್ ಕ ಸಾಮ್ನಾ' ಹಿಂದಿಯ ಟಾಬ್ಲಾಯ್ಡ್ ಆಗಿದೆ. ಉಭಯ ಪತ್ರಿಕೆಗಳ ಇನ್‌ಪ್ರಿಂಟ್‌ನಲ್ಲಿ ಸಂಪಾದಕರು ಎಂದು ಉದ್ಧವ್ ಹೆಸರಿದೆ. ಈ ಹಿಂದೆ ಸಂಪಾದಕರಾಗಿದ್ದ ಠಾಕ್ರೆ, ಮುಖ್ಯಮಂತ್ರಿಯಾದ ಬಳಿಕ ಆ ಹೊಣೆಯನ್ನು ಪತ್ನಿ ರಶ್ಮಿ ಅವರಿಗೆ ವಹಿಸಿದ್ದರು. ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ ಸದ್ಯ ಬಂಧಿಸಿದೆ. ಹೀಗಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
PublicNext
06/08/2022 03:58 pm