ಬೆಂಗಳೂರು: ಕರಾವಳಿಯಲ್ಲಿ ಸರಣಿ ಹತ್ಯೆ ಆಗಿವೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರರನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿ ರಾಜಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿಯೇ ಅಮಿತ್‌ಶಾ ಉಳಿದುಕೊಂಡಿದ್ದು ಅಲ್ಲಿಯೇ ನಳೀನ್ ಕುಮಾರ್ ಕಟೀಲ್ ಅವರಿಗೆ ಅಮಿತ್ ಶಾ ಸಾಲು ಸಾಲು ಪ್ರಶ್ನೆ ಕೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಕ್ಷೇತ್ರದಲ್ಲಿಯೇ 10 ದಿನಗಳ ಅಂತರದಲ್ಲಿ ಮೂರು ಸರಣಿ ಹತ್ಯೆ ಆಗಿವೆ. ಬಿಜೆಪಿ ರಾಜಾಧ್ಯಕ್ಷರಾಗಿ ನೀವು ಇದನ್ನ ತಡೆಯೋವಲ್ಲಿ ವಿಫಲರಾಗಿದ್ದೀರಿ ಎಂದು ಕಟೀಲ್‌ಗೆ ಅಮಿತ್ ಶಾ ನೇರವಾಗಿಯೇ ಹೇಳಿ ಬಿಟ್ಟಿದ್ದಾರೆ.
ನೀವು ಸಂಸದರು ಮಾತ್ರವಲ್ಲ. ರಾಜಾಧ್ಯಕ್ಷರೆಂಬೋದು ನೆನಪಿರಲಿ.ಕಾನೂನು ಸುವ್ಯವಸ್ಥೆಯಲ್ಲಿ ಹಾಳಾದರೆ ಅದಕ್ಕೆ ಜವಾಬ್ದಾರಿ ಯಾರು ? ಇದಕ್ಕೆ ನಿಮ್ಮ ಉತ್ತರ ಏನು ? ಬಿಜೆಪಿಯನ್ನ ಅಧಿಕಾರಕ್ಕೆ ತರಲು ನಿಮ್ಮ ಶ್ರಮವೇನು ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನ ಕೇಳಿ ನಳೀನ್ ಕುಮಾರ್ ಕಟೀಲ್‌ಗೆ ಸರಿಯಾಗಿಯೆ ಕ್ಲಾಸ್ ತೆಗೆದುಕೊಂಡಿದ್ದಾರೆ.
PublicNext
04/08/2022 03:37 pm