ನೋಡಿ, ಕೇಳಿ ನಮ್ಮ ಕಾಂಗ್ರೆಸ್ಸಿಗರ ಅನುವಾದ ಪ್ರಾವಿಣ್ಯತೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಯುವ ನೇತಾರ ರಾಹುಲ್ ಗಾಂಧಿ ಇಂಗ್ಲೀಷಿನಲ್ಲಿ ಮಾಡಿದ ಭಾಷಣವನ್ನು ಕರ್ನಾಟಕದ ಮತ್ತೊಬ್ಬ ಕಾಂಗ್ರೆಸ್ ನಾಯಕ ಬಿ.ಎಲ್ ಶಂಕರ್ ಕನ್ನಡದಲ್ಲಿ ಯಾವ ರೀತಿ ಅನುವಾದ ಮಾಡಿ ಪಾಂಡಿತ್ಯ ಮೆರೆದಿದ್ದಾರೆ.
ರಾಹುಲ್ ಗಾಂಧಿ ಅವರ ಇಂಗ್ಲೀಷಿ ಭಾಷಣ ಅರ್ಥವಾಗದಷ್ಟು ಹೆಬ್ಬೆಟ್ಟಿನ ಜನ ನಮ್ಮವರಲ್ಲ. ನಿಮಗಿಂತಲೂ ಚೆನ್ನಾಗಿ ಅವರಿಗೆ ಅರ್ಥವಾಗುತ್ತೆ. ರಾಹುಲ್ ಆಡಿದ ಮಾತೆ ಬೇರೆ ಈ ಮಹಾಶಯ ತರ್ಜುಮೆ ಮಾಡಿದ್ದೇ ಬೇರೆ.
ರಾಹುಲ್ " ನನಗೆ ನೆನಪಿದೆ ಕರ್ನಾಟಕದ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರೊಂದಿಗೆ ಇಂದಿರಾ ಕ್ಯಾಂಟೀನ್ ಹೋಗಿದ್ದೆ ,
ಬಿ.ಎಲ್ ಶಂಕರ್ . " ಕರ್ನಾಟಕದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಾಯಕತ್ವದಲ್ಲಿ ಮತ್ತೊಮ್ಮೆ ಇಂತಹ ಕಾರ್ಯಕ್ರಮ ಜನರಿಗೆ ತಲುಪಿಸುವ ಪ್ರಯತ್ನ ಮಾಡ್ತಾ ಇದೆ.
ರಾಹುಲ್ " ಅಲ್ಲಿ ಸ್ವಾದಿಷ್ಟ ಅಹಾರ ಸೇವಿದೆವು''
ಬಿ.ಎಲ್ ಶಂಕರ್ " ನಾವು ಅಧಿಕಾರದಲ್ಲಿ ಇದ್ದಂಥಾ ಸಂದರ್ಭದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಮುಖಾಂತರ ಪೌಷ್ಠಿಕ ಆಹಾರ ಕೊಡ್ತಾ ಇದ್ವಿ''
ರಾಹುಲ್ ಅವರು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಶ್ಲಾಘಿಸಿದರೆ ಇವ್ರು ಇಲ್ಲಿಯೂ ತಮ್ಮ ಅಧಿಕಾರದ ಹಪಾಹಪಿ ಪ್ರದರ್ಶಿಸಿದ್ದಾರೆ.
ಕಾಂಗ್ರೆಸ್ಸಿಗರೆ ನಿಮ್ಮ ಇಂಗ್ಲೀಷ್ ಕನ್ನಡ ಜ್ಞಾನಕ್ಕೆ ಒಂದು ಹ್ಯಾಟ್ಸಾಫ್
PublicNext
04/08/2022 12:42 pm