ನವದೆಹಲಿ: ಹಣ ಅಕ್ರಮ ವರ್ಗಾವಣೆ ಆರೋಪದಡಿ ಬಂಧನಕ್ಕೊಳಗಾಗಿರುವ ಅರ್ಪಿತಾ ಮುಖರ್ಜಿ ಹೇಳಿರುವ ಹೇಳಿಕೆ ಎಲ್ಲರನ್ನು ನಿಬ್ಬೆರಗಾಗಿಸಿದೆ. ಹೌದು ಕೋಟಿ,ಕೋಟಿ ಹಣ ಸಿಕ್ಕ ಬಳಿಕ ಪಶ್ಚಿಮ ಬಂಗಾಳದಲ್ಲಿ ಇ.ಡಿ.ಯಿಂದ ಬಂಧನಕ್ಕೊಳಗಾದ ಉಚ್ಚಾಟಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಈ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
“ನಾನು ಇಲ್ಲದಿದ್ದಾಗ, ನನಗೆ ಗೊತ್ತಿಲ್ಲದಂತೆಯೇ ಯಾರೋ ನನ್ನ ಫ್ಲ್ಯಾಟ್ ನಲ್ಲಿ ಹಣವನ್ನು ತಂದಿಟ್ಟಿದ್ದರು. ಈ ಬಗ್ಗೆ ನನಗೆ ಮಾಹಿತಿಯೇ ಇಲ್ಲ.!’ ಎಂದಿದ್ದಾರೆ.
ಫ್ಲ್ಯಾಟ್ನಲ್ಲಿ 21 ಕೋಟಿ ರೂ. ನಗದು ಮತ್ತು ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣ ಸಿಕ್ಕಿದ ಬಳಿಕ ಜು.23ರಂದು ಜಾರಿ ನಿರ್ದೇಶನಾಲಯವು ಪಾರ್ಥ ಹಾಗೂ ಅರ್ಪಿತಾರನ್ನು ಬಂಧಿಸಿತ್ತು. ನಂತರ, ಜು.27ರಂದು ಅರ್ಪಿತಾರ ಮತ್ತೊಂದು ಫ್ಲ್ಯಾಟ್ ನಿಂದ 27.9 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿತ್ತು.
ಸದ್ಯ ಇ.ಡಿ. ಕಸ್ಟಡಿಯಲ್ಲಿರುವ ಅರ್ಪಿತಾ, “ಆ ಹಣ ನನಗೆ ಸೇರಿದ್ದಲ್ಲ. ನಾನು ಅಲ್ಲಿ ಇಲ್ಲದಿದ್ದಾಗ ಯಾರೋ ತಂದಿಟ್ಟಿರಬೇಕು’ ಎಂದು ಹೇಳಿದ್ದಾರೆ. ಇದೇ ವೇಳೆ, ಶಿಕ್ಷಕರ ಅಕ್ರಮ ನೇಮಕಕ್ಕೆ ಪಡೆದ ಲಂಚದ ಮಾಹಿತಿಯನ್ನು ಒಳಗೊಂಡ 40 ಪುಟಗಳ ಡೈರಿಯೂ ಇ.ಡಿ.ಗೆ ಸಿಕ್ಕಿದೆ.
PublicNext
03/08/2022 10:46 am