ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಆರ್ಥಿಕತೆ ಭದ್ರವಾಗಿಯೇ ಇದೆ-ನಿರ್ಮಲಾ ಸೀತಾರಾಮನ್

ನವದೆಹಲಿ: ಪ್ರಪಂಚದ ವಿದ್ಯಮಾನಗಳು ಭಾರತದ ಮೇಲೂ ಆಗಿದೆ.ಆದರೆ, ವಿಶ್ವದ ಇತರ ದೇಶಗಳನ್ನ ಹೋಲಿಸಿದರೆ,

ಭಾರತ ಆರ್ಥಿಕವಾಗಿ ಭದ್ರವಾಗಿಯೇ ಇದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬೆಲೆ ಏರಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಿಟ್ಟವಾಗಿಯೇ ಉತ್ತರಿಸಿದ್ದಾರೆ. ಭಾರತದ ಆರ್ಥಿಕವಾಗಿ ಮೇಲೆತ್ತಲು ಪ್ರಧಾನಿ ಮೋದಿ ಸರ್ಕಾರ ಸಕಲ ಕ್ರಮಗಳನ್ನ ಜರುಗಿಸಿದೆ ಅಂತಲೇ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

ಲೋಕಸಭೆಯಲ್ಲಿ 15 ದಿನಗಳಿಂದಲೇ ಜಿಎಸ್‌ಟಿ ದರ ಏರಿಕೆ ಹಾಗೂ ಇತರ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ವಿಪಕ್ಷಗಳು ಗಲಾಟೆ ನಡೆಸುತ್ತಿದ್ದವು. ಆದರೆ, ವಿಪಕ್ಷಗಳ ಪ್ರತಿ ಪ್ರಶ್ನೆಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರ ಕೊಟ್ಟಿದ್ದಾರೆ.

Edited By :
PublicNext

PublicNext

02/08/2022 03:16 pm

Cinque Terre

31.75 K

Cinque Terre

4