ಮಂಗಳೂರು: ನಾನು ಎಂಟು ಹೆಣ್ಣುಮಕ್ಕಳ ತಂದೆ. ನನಗೆ ಹೆಣ್ಣುಮಕ್ಕಳ ನೋವು ಅರ್ಥ ಆಗುತ್ತದೆ. ಪತಿಯನ್ನ ಕಳೆದುಕೊಂಡ ಪ್ರವೀಣ್ ನೆಟ್ಟಾರು ಪತ್ನಿಯ ನೋವು ಏನೂ ಎಂತಹದ್ದು ಅನ್ನೋದು ತಿಳಿದಿದೆ ಅಂತ ಜೆಡಿಎಸ್ ರಾಜಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ ಬಳಿಕ ಸಿ.ಎಂ.ಇಬ್ರಾಹಿಂ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ. ನಾನು ಪ್ರವೀಣ್ ಪತ್ನಿ ಜೊತೆಗೆ ಮಾತನಾಡಿದ್ದೇನೆ. ಆಯಕೆ ಗಂಡನನ್ನ ಕಳೆದುಕೊಂಡಿದ್ದಾರೆ. ನಾವೆಷ್ಟೇ ಸಾಂತ್ವನ ಹೇಳಿದರೂ ಅಷ್ಟೇನೆ. ಕಳೆದುಕೊಂಡದ್ದನ್ನ ವಾಪಸ್ ತಂದುಕೊಡಲು ಆಗೋದಿಲ್ಲ ಅಂತಲೇ ಇಬ್ರಾಹಿಂ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಪತ್ನಿಯ ಕಷ್ಟ ನನಗೆ ಅರ್ಥ ಆಗುತ್ತದೆ. ಆಕೆಯ ನೋವು ಕಂಡು ನನಗೆ ಕರುಳು ಕಿತ್ತು ಬಂದಂತೆ ಆಗುತ್ತಿದೆ ಎಂದು ಬೇಸರದಿಂದಲೇ ಇಬ್ರಾಹಿಂ ತಿಳಿಸಿದ್ದಾರೆ.
PublicNext
01/08/2022 03:11 pm