ಭೂ ಹಗರಣ ಕೇಸ್ ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಶಿವಸೇನೆ ಪಕ್ಷದ ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸಿದ್ದಾರೆ. 1,034 ಕೋಟಿ ಮೌಲ್ಯದ ಹಗರಣ ನಡೆದ ಆರೋಪ ಕೇಳಿ ಬಂದಿರುವ ಪತ್ರ ಚಾವ್ಲಾ ಭೂ ಹಗರಣ ಇದಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾವತ್ ಅವರ ಮುಂಬೈ ಮನೆ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಈವರೆಗೆ ನಿರಂತರವಾಗಿ ಶೋಧ ನಡೆಸಿದ್ದರು.
ರಾವತ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಶಕ್ಕೆ ಪಡೆಯುವ ಸಾಧ್ಯತೆ ಇದೆ.
PublicNext
31/07/2022 05:02 pm