ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂತಹ ಹತ್ಯೆಗೆ ಸಿಎಂ ಬೊಮ್ಮಾಯಿ ಪ್ರಚೋಧನೆಯೇ ಕಾರಣ-ಡಿಕೆಶಿ ಆರೋಪ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋವಲ್ಲಿ ಸರ್ಕಾರ ವಿಫಲವಾಗಿದೆ. ಮಂಗಳೂರಲ್ಲಿ ಆಗ್ತಿರೋ ಹತ್ಯೆಗೆಲ್ಲ ಸಿಎಂ ಪ್ರಚೋಧನೆನೆ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇರವಾಗಿಯೇ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲಿಯೇ ಸಿದ್ದರಾಮಯ್ಯ ಕೂಡ ದೂರಿದ್ದು, ಮತಾಂಧ ಶಕ್ತಿಗಳನ್ನ ಮಟ್ಟಹಾಕಿ, ನಾವೇನೂ ಬೇಡ ಅಂತೀವಾ ಅಂತಳೂ ಸಿದ್ದರಾಮಯ್ಯ ಹೇಳಿದ್ದಾರೆ.

ಕರಾವಳಿ ಕೋಮು ಹತ್ಯೆಗಳಲ್ಲಿ ಕುದಿಯುತ್ತಿದೆ.ಒಂದಾದ ಮೇಲೊಂದರಂತೆ ಹತ್ಯೆ ಆಗುತ್ತಿವೆ. ಇದರಿಂದ ರಾಜ್ಯವೂ ಬೆಚ್ಚಿ ಬೀಳುತ್ತಿದೆ. ಕಠಿಣ ಕ್ರಮತೆಗೆದುಕೊಳ್ತಿವಿ ಅನ್ನೋ ಸರ್ಕಾರದ ಮಾತುಗಳಿಗೆ ಜನ ಬೇಸತ್ತು ಹೋಗಿದ್ದಾರೆ.

ಇದರ ಮಧ್ಯೆ ಹಂತಕರ ಶೂಟೌಟ್,ಎನ್‌ಕೌಂಟರ್ ಬಗ್ಗೆ ಸರ್ಕಾರ ಸುಳಿವು ಕೊಟ್ಟಿದೆ. ಸರಣಿ ಹತ್ಯೆಯಲ್ಲಿ ಭಾಗಿ ಆದವರ ಬಗ್ಗೆ ಕಠಿಣ ಕ್ರಮದ ಎಚ್ಚರಿಕೆ ಕೂಡ ಕೊಟ್ಟಿದೆ.

Edited By :
PublicNext

PublicNext

30/07/2022 07:33 am

Cinque Terre

34.8 K

Cinque Terre

2