ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಬಿಜೆಪಿ ಸರ್ಕಾವನ್ನ ಚಪ್ಪಲ್ಲಿಯಲ್ಲಿ ಹೊಡೀಬೇಕಾ" ಎಂದ ಸಿದ್ದು ತಪ್ಪೊಪ್ಪಿಕೊಂಡದ್ದು ಯಾಕೆ ?

ಮೈಸೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಆಡಳಿತ ನಡೆಸೋ ತಾಕತ್ತಿಲ್ಲ. ರಾಜ್ಯ ಸರ್ಕಾರ ಸತ್ತು ಹೋಗಿದೆ. ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ಮಂಗಲೂರು ಗಲಭೆಗೆ ರಾಜ್ಯ ಸರ್ಕಾರವೆ ಹೊಣೆ ಎಂದು ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡಿದ್ದು,ಕಾಂಗ್ರೆಸ್ ಸರ್ಕಾರ ಇದಿದ್ದರೇ, ಕಲ್ಲು ಹೊಡೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿದ್ದಾನೆ. ಒಬ್ಬ ಸಂಸದ ಆಡೋ ಮಾತೇನ್ರಿ ಇದು? ಈಗ ಇವರದ್ದೇ ಸರ್ಕಾರ ಇದೆ. ಕೊಳೆತ ಮೊಟ್ಟೆಯಿಂದ ಹೊಡೀಬೇಕಾ ? ಚಪ್ಪಲಿಯಲ್ಲಿ ಹೊಡೀಬೇಕಾ ? ಈಗ ಇವರನ್ನ ಯಾವದರಿಂದ ಹೊಡೀಬೇಕು ಅಂತಲೇ ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಆ ಕ್ಷಣವೇ ಅಲರ್ಟ್ ಆದ ಸಿದ್ದು, ಚಪ್ಪಲಿ ಅನ್ನೋ ಪದವನ್ನ ನಾನು ಬಳಸಿರೋದು ಸರಿಯಲ್ಲ. ನಾನು ಆಕ್ರೋಶದಲ್ಲಿಯೇ ಆ ಪದ ಬಳಕೆ ಮಾಡಿದ್ದೇನೆ. ಆ ಪದವನ್ನ ನಾನು ವಾಪಸ್ ಪಡೆಯುತ್ತೇನೆ ಅಂತಲೂ ಸಿದ್ದು ಹೇಳಿ ಬಿಟ್ಟಿದ್ದಾರೆ.

Edited By :
PublicNext

PublicNext

29/07/2022 01:16 pm

Cinque Terre

48.52 K

Cinque Terre

8

ಸಂಬಂಧಿತ ಸುದ್ದಿ