ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಸಂತೋಷ: ಬಿಜೆಪಿ ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದರೆ ಸಂತೋಷ ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಸಿದ್ದರಾಮಯ್ಯೋತ್ಸವದ ಬಗ್ಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯೋತ್ಸವದಿಂದ ನಮಗೇನೂ ಆತಂಕ ಇಲ್ಲ. ಅವರು ಮಾಡುವುದು ಅವರ ಉತ್ಸವ. ನಾವು ಮಾಡೋದು ಜನರ ಉತ್ಸವ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗ್ತಾರಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಾಗರಾಜ್, 'ಆಗಲಿ, ಸಂತೋಷ. ಸಿದ್ದರಾಮಯ್ಯ ಸಿಎಂ ಆದರೆ ಸಂತೋಷವೇ. ಯಾರ ಹಣೆಬರಹದಲ್ಲಿ ಏನ್ ಬರೆದಿದೆ ಅನ್ನೋದು ಯಾರಿಗೆ ಗೊತ್ತು. ಆಗೋದನ್ನ ಯಾರಿಗೆ ತಡೆಯೋಕೆ ಆಗುತ್ತೆ? ಅದನ್ನ ತೀರ್ಮಾನ ಮಾಡಬೇಕಾಗಿರೋದು ರಾಜ್ಯದ ಜನ. ಅದು ನಾವು-ನೀವು ತೀರ್ಮಾನ ಮಾಡೋಕೆ ಆಗಲ್ಲ' ಎಂದು ಹೇಳಿದರು.

Edited By : Vijay Kumar
PublicNext

PublicNext

26/07/2022 10:55 pm

Cinque Terre

67.95 K

Cinque Terre

11

ಸಂಬಂಧಿತ ಸುದ್ದಿ