ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ : ದಂಡಿನ ಮಾರಮ್ಮ ದರ್ಶನ ಪಡೆದ ಆರೋಗ್ಯ ಸಚಿವ

ಮಧುಗಿರಿ: ಜನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಮಧುಗಿರಿ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಮಂಗಳವಾರ ಮಧುಗಿರಿಯಲ್ಲಿ ದಂಡಿನ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ದೇವಾಲಯ ಸಮಿತಿಯ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಶಾಸಕ ಚಿದಾನಂದ್ ಎಂ ಗೌಡರು ಮತ್ತು ವಿಭಾಗ ಪ್ರಭಾರಿಗಳಾದ ಕೆ.ಎಸ್. ನವೀನ್ ರವರು,ಸಿರಾ ವಿಧಾನಸಭಾ ಕ್ಷೇತ್ರದ ಶಾಸಕರದ ರಾಜೇಶ್ ಗೌಡ, ಮಾಜಿ ಶಾಸಕ ಗಂಗಹನುಮಯ್ಯ, ಹಿರಿಯರ ಮುಖಂಡರು ನಾಗರಾಜಪ್ಪ ಸೇರಿದಂತೆ ಮುಂತಾದವರಿದ್ದರು.

Edited By : Nirmala Aralikatti
PublicNext

PublicNext

26/07/2022 08:10 pm

Cinque Terre

23.75 K

Cinque Terre

0

ಸಂಬಂಧಿತ ಸುದ್ದಿ