ಕೊಲ್ಕತ್ತಾ: ಶಾಲಾ ಶಿಕ್ಷಕರ ನೇಮಕಾತಿ ಹಾಗೂ ಆಪ್ತೆಯ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ದುಡ್ಡು ಬಂಗಾಳದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಪಾರ್ಥ ಚಟರ್ಜಿಯನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಜಾರಿ ನಿರ್ದೇಶನಾಲಯ ಚಟರ್ಜಿಯನ್ನ ಬಂಧ ಕೂಡ ಮಾಡಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ತಾನೂ ಎಂದಿಕೊಂಡು,ಇದರಿಂದ ಬಹು ಬೇಗನೆ ಹೊರ ಬರಬಹುದು ಎಂದುಕೊಂಡಿದ್ದ ಚಟರ್ಜಿಗೆ ಈಗ ಭ್ರಮನಿರಸವಾಗಿದೆ.
ಹೌದು. ಪಾರ್ಥ ಚಟರ್ಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ನಾಲ್ಕು ಬಾರಿ ಕರೆ ಮಾಡಿದ್ದಾರೆ. ಆದರೆ, ಒಮ್ಮೆಯಾದರೂ ಮಮತಾ ಕಾಲ್ ಎತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದರೊಂದಿಗೆ ಪಾರ್ಥ ಚಟರ್ಜಿಯ ಭರವಸೆ ನುಚ್ಚು ನೂರಾಗಿದೆ.
ಸಾಕ್ಷಿ ಸಮೇತ ಪಾರ್ಥ ಚಟರ್ಜಿ ಸಿಕ್ಕಿ ಬಿದಿದ್ದಾರೆ. ಈ ಒಂದು ಕೇಸ್ ಗೆ ಸಂಬಂಧಿಸಿದಂತೆ ಮಮತಾ ಒಂದೇ ಒಂದು ಹೇಳಿಕೆ ಕೊಟ್ಟರೂ ಅಷ್ಟೆ. ಜನರ ಕೆಂಗಣ್ಣಿಗೆ ಗುರಿಯಾಗ್ತಿನಿ ಅನ್ನೋ ಅಂದಾಜಿನ ಮೇಲೆನೇ ಮಮತಾ ಬ್ಯಾನರ್ಜಿ ಯಾವುದೇ ರೀತಿಯ ಹೇಳಿಕೆಯನ್ನ ಇಲ್ಲಿವರೆಗೂ ಇತರ ಸಚಿವರು ಕೂಡ ಈ ಬಗ್ಗೆ ಎಲ್ಲೂ ಬಾಯಿಬಿಟ್ಟಿಲ್ಲ.
PublicNext
25/07/2022 05:06 pm