ಶಿರಾ: ಶಿರಾ ವಿಧಾನಸಭೆಯ ಟಿಕೆಟ್ ಯಾರಿಗೆ ನೀಡಬೇಕು ಎನ್ನುವ ವಿಚಾರ ಹೈ ಕಮಾಂಡ್ ಗೆ ಬಿಟ್ಟಿದ್ದು. ಶಿರಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಯಾರಿಗೆ ಜನರ ಒಲವು ಇದೆ? ಯಾರು ಪಕ್ಷ ಸಂಘಟನೆ ಮಾಡುತ್ತಾರೆ ಎನ್ನುವ ಎಲ್ಲ ಮಾನದಂಡಗ ಳನ್ನು ಇಟ್ಟುಕೊಂಡು ಕಾರ್ಯಕರ್ತರುಗಳು ಅಭಿಪ್ರಾಯಗಳ ಸಂಗ್ರಹಮಾಡಿ ಶಿರಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಶಿರಾ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು ಒಂದೆಡೆ ಜಯಚಂದ್ರ ಮತ್ತೊಂದೆಡೆ ಸಾಸಲು ಸತೀಶ್ ಇಬ್ಬರ ನಡುವೆ ಟಿಕೇಟ್ ಪೈಪೋಟಿ ನಡೆಯುತ್ತಿದೆ ಯಾರಿಗೆ ಪಕ್ಷ ಟಿಕೆಟ್ ನೀಡಲಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಹಿರಿತನದ ಆಧಾರದ ಮೇಲೆ 72 ವರ್ಷದ ಜಯಚಂದ್ರಗೆ ಟಿಕೆಟ್ ನೀಡಬೇಕಾ! ಅಥವಾ ನಿರಂತರವಾಗಿ ಪಕ್ಷ ಸಂಘಟನೆ ಮಾಡುತ್ತಿರುವ ಹಿಂದುಳಿದ ವರ್ಗಕ್ಕೆ ಸೇರಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಸಲು ಸತೀಶ್ ನೀಡಬೇಕು ಎನ್ನುವ ಗೊಂದಲ ಪಕ್ಷದಲ್ಲಿ ಸೃಷ್ಟಿಯಾಗಿದ್ದು ಇಬ್ಬರ ಜೊತೆಯಲ್ಲಿ ಇರುವಂತಹ ಕಾರ್ಯಕರ್ತರು ಯಾರೊಂದಿಗೆ ಹೆಚ್ಚು ಗುರುತಿಸಿಕೊಳ್ಳಬೇಕು ಎನ್ನುವ ಗೊಂದಲ ಕ್ಷೇತ್ರದಲ್ಲಿ ಯಕ್ಷಪ್ರಶ್ನೆಯಾಗಿದೆ ಇದಕ್ಕೆ ಹೈಕಮಾಂಡ್ ಶೀಘ್ರದಲ್ಲೇ ಇತಿಶ್ರೀ ಹಾಡಬೇಕಿದೆ.
ಸಿದ್ದರಾಮಯ್ಯ ಶಿರಾ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶುಕ್ರವಾರ ಹಲವು ಮುಖಂಡರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಿರುವ ಬಗ್ಗೆ ಪಕ್ಷದೊಳಗೆ ಗುಸುಗುಸು ಶುರುವಾಗಿದೆ. ಒಟ್ಟಾರೆಯಾಗಿ ಶಿರಾ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲಮಯವಾಗಿದೆ.
PublicNext
23/07/2022 09:41 am