ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ರಾಷ್ಟ್ರಪತಿ ಚುನಾವಣೆ ಫಲಿತಾಂಶ ಪ್ರಕಟ

ನವದೆಹಲಿ: ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು ಮಧ್ಯಾಹ್ನದ ಹೊತ್ತಿಗೆ ಪ್ರಕಟಗೊಳ್ಳಲಿದೆ.

ಜುಲೈ 18ರಂದು ಮತದಾನ ನಡೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಮತದಾನ ಎಣಿಕೆ ಕಾರ್ಯ ಆರಂಭವಾಗಲಿದೆ. ರಾಷ್ಟ್ರಪತಿ ಹುದ್ದೆಗೆ ಎನ್‍ಡಿಎಯಿಂದ ದ್ರೌಪದಿ ಮುರ್ಮು, ವಿಪಕ್ಷಗಳಿಂದ ಯಶವಂತ್ ಸಿನ್ಹಾ ಅವರನ್ನ ಕಣಕ್ಕಿಳಿಸಲಾಗಿತ್ತು. ಲೆಕ್ಕಾಚಾರದ ಪ್ರಕಾರ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬಹುತೇಕ ವಿಜಯಶಾಲಿ ಆಗಲಿದ್ದಾರೆ.

ಬುಡಕಟ್ಟು ಜನಾಂಗದ ನಾಯಕಿ ಹಾಗೂ ಜಾರ್ಖಂಡ್​​​ನ ಮಾಜಿ ರಾಜ್ಯಪಾಲರಾಗಿದ್ದವರು ದ್ರೌಪದಿ ಮುರ್ಮು. 64ರ ಹರೆಯದ ಮುರ್ಮು ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಮಾಜಿ ಬಿಜೆಪಿ ನಾಯಕರಾಗಿರುವ ಸಿನ್ಹಾ, 1984ರಲ್ಲಿ ಐಎಎಸ್ ನಿಂದ ರಾಜೀನಾಮೆ ನೀಡಿ ಜನತಾ ದಳ ಸೇರಿದ್ದರು.1988ರಲ್ಲಿ ಅವರು ಸಂಸದರಾಗಿದ್ದ, ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ವಾಜಪೇಯಿ ಸಚಿವ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದರು. ರಾಮನಾಥ ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಮುಗಿಯಲಿದ್ದು ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Edited By : Vijay Kumar
PublicNext

PublicNext

21/07/2022 08:25 am

Cinque Terre

26.67 K

Cinque Terre

4