ಚಿಕ್ಕೋಡಿ : ಪ್ರತಿ ಚುನಾವಣೆ ಬಂದಾಗಲೂ ಪ್ರಧಾನಿ ಮೋದಿ ಅವರು ಎರಡು ಬಾಂಬ್ ಇಟ್ಟುಕೊಂಡಿರುತ್ತಾರೆ. ಸಂದರ್ಭ ನೋಡಿ ಅವುಗಳನ್ನು ಸೂಕ್ತ ಜಾಗದಲ್ಲಿ ಎಸೆದು ಬಳಿಕ ಪಾಕಿಸ್ತಾನದ ಹೆಸರು ಹೇಳಿ ಬಿಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲ್ಲಲು ಸಾಕಷ್ಟು ತಂತ್ರಗಳನ್ನು ಮಾಡುತ್ತದೆ. ನಮ್ಮ ಕಾರ್ಯಕರ್ತರು ಸಹ ಗಟ್ಟಿಯಾಗಿರಬೇಕು. ಎಂಥಹ ಶಕ್ತಿ ಬಂದರೂ ಅದನ್ನು ಕಾರ್ಯಕರ್ತರು ಎದುರಿಸಬೇಕು ಎಂದು ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.
ಇನ್ನು ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದ್ರೆ ಈ ಭಾಗದ ರಕ್ಷಣೆಯ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ರಾಜಕೀಯದಲ್ಲಿ ಹಗ್ಗಜಗ್ಗಾಟ ಇದ್ದೇ ಇರುತ್ತದೆ. ಇದನ್ನ ಬದಿಗೊತ್ತಿ ಪಕ್ಷ ಸಂಘಟನೆಗೆ ಒತ್ತು ಕೊಡಬೇಕು. ಆಗ ಜನರ ಸೇವೆ ಮಾಡಲು ಸಾಧ್ಯವಾಗಲಿದೆ ಎಂದರು.
PublicNext
18/07/2022 06:58 pm