ಕೊಲಂಬೋ: ಶ್ರೀಲಂಕಾ ದೇಶದ ಹಂಗಾಮಿ ಅಧ್ಯಕ್ಷರಾಗಿ ಪ್ರಧಾನಿ ರಾನಿಲ್ ವಿಕ್ರಮ್‌ಸಿಂಘೆ ನೇಮಕಗೊಂಡಿದ್ದಾರೆ. ಗೋಟಬಯ ರಾಜಪಕ್ಸ ಇಂದು ಬೆಳಗ್ಗೆ ದೇಶದಿಂದಲೇ ಪರಾರಿ ಆದ ಹಿನ್ನೆಲೆಯಲ್ಲಿಯೇ ಈ ಒಂದು ಬೆಳವಣಿಗೆ ಆಗಿದೆ.
ಆರ್ಥಿಕ ಬಿಕ್ಕಟ್ಟಿನಿಂದಲೇ ಶ್ರೀಲಂಕಾದಲ್ಲಿ ಜನ ತತ್ತಿರಿಸಿ ಹೋಗಿದ್ದಾರೆ. ಇದರ ಪರಿಣಾಮ ಅಧ್ಯಕ್ಷ ಗೋಟಬಯ ರಾಜಪಕ್ಸ ಮನೆ ಎದುರು ಪ್ರತಿಭಟನಾಕಾರರು ಹೋರಾಟ ಮಾಡಿ ರಾಜೀನಾಮೆ ಕೇಳಿದ್ದಾರೆ.
ಆದರೆ, ಇವರ ಹೋರಾಟ ಮುಗಿಲು ಮುಟ್ಟಿದ್ದರಿಂದಲೇ ಗೋಟಬಯ ರಾಜಪಕ್ಸ ಮಾಲ್ಡೀವ್ಸ್ ಗೆ ಪರಾರಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ರಾನಿಲ್ ವಿಕ್ರಮ್‌ಸಿಂಘೆ ಈಗ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದಾರೆ.
PublicNext
13/07/2022 03:57 pm