ಕೊಲಂಬೋ: ಶ್ರೀಲಂಕಾದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ.ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶದಿಂದಲೇ ಪರಾರಿ ಆಗಿದ್ದಾರೆ. ಇವರು ಹೋಗುತ್ತಿದ್ದಂತೇನೆ ಅಧ್ಯಕ್ಷರ ಮನೆ ಬಳಿ ಪ್ರತಿಭಟಿಸ್ತಿರೋ ಜನ ರೊಚ್ಚಿಗೆದ್ದಿದ್ದಾರೆ. ಇವರನ್ನ ಚದುರಿಸಲು ಭದ್ರತಾ ಪಡೆ ಗಾಳಿಯಲ್ಲಿ ಗುಂಡು ಹಾರಿಸಿದೆ.
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ ಶ್ರೀಲಂಕಾ ದೇಶದಲ್ಲೀಗ ಜನ ರೊಚ್ಚಿಗೆದ್ದಿದ್ದಾರೆ. ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಇಂದು ಮುಂಜಾನೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶ ಬಿಟ್ಟು,ಮಾಲ್ಡೀವ್ಸ್ ಗೆ ಹೋಗಿದ್ದೇ ತಡ, ಇಲ್ಲಿಯ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಜನರ ಸಹನೆಯ ಕಟ್ಟೆ ಒಡೆದು ಹಿಂಸಾಚಾರಕ್ಕೆ ತಿರುಗುತ್ತಿದೆ.
PublicNext
13/07/2022 02:08 pm