ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ನಗರದ ಹೆಸರು ಬದಲಾವಣೆ ಮಾಡುತ್ತಿರುವ ಸರಕಾರದ ಉದ್ದೇಶಕ್ಕೆ ಎಐಎಂಐಎಂ ಸಂಸದ ಇಮ್ತಿಯಾಜ್ ಜಲೀಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಿನ್ನೆ ಸೋಮವಾರ ಪತ್ರಿಕಾಗೋಷ್ಟಿ ನಡೆಸಿರುವ ಅವರು ಕೇವಲ ಹೆಸರು ಬದಲಾವಣೆಯಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಜಾತಿ-ಧರ್ಮದ ದೃಷ್ಟಿಯಲ್ಲಿ ನೋಡಬೇಡಿ. ಔರಂಗಾಬಾದ್ ಎಂಬ ಹೆಸರು ಕೇಳಿದರೆ ಅದು ಒಂದು ಧರ್ಮಕ್ಕೆ ಸೀಮಿತವಾಗಿದೆ ಎಂದು ಯಾರಿಗೂ ಅನಿಸುವುದಿಲ್ಲ. ಹೆಸರು ಬದಲಾವಣೆ ಮಾಡುವುದರಿಂದ ಪ್ರತಿಯೊಬ್ಬ ವ್ಯಕ್ತಿಯ ಪ್ರತಿಯೊಂದು ವೈಯಕ್ತಿಕ ದಾಖಲೆಗಳನ್ನು ಬದಲಾಯಿಸಬೇಕಾಗುತ್ತದೆ. ಸರ್ಕಾರದ ಎಲ್ಲ ದಾಖಲಾತಿಗಳನ್ನೂ ಹೊಸದಾಗಿ ಮುದ್ರಿಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ಪ್ರಕ್ರಿಯೆಗಳಿಂದ ಸರಕಾರಕ್ಕೆ ಸುಮಾರು 1 ಸಾವಿರ ಕೋಟಿ ರೂ. ನಷ್ಟಚಾಗಲಿದೆ. ಈ ಎಲ್ಲ ಕಾರಣಗಳಿಂದ ಔರಂಗಾಬಾದ್ ನಗರದ ಹೆಸರು ಬದಲಾವಣೆ ಉದ್ದೇಶವನ್ನು ಕೈ ಬಿಡಬೇಕೆಂದು ಇಮ್ತಿಯಾಜ್ ಹೇಳಿದ್ದಾರೆ.
PublicNext
12/07/2022 09:12 am