ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ: ಎಐಎಡಿಎಂಕೆ ಪಕ್ಷದ ಎರಡು ಬಣಗಳ ಬೆಂಬಲಿಗರ ನಡುವೆ ಘರ್ಷಣೆ

ಚೆನ್ನೈ: ತಮಿಳುನಾಡಿನ ವಿಧಾನಸಭೆಯ ವಿರೋಧ ಪಕ್ಷ ಎಐಎಡಿಎಂಕೆ ನಾಯಕತ್ವ ತಿಕ್ಕಾಟದ ನಡುವೆ ಎರಡೂ ಬಣಗಳ ಬೆಂಬಲಿಗರ ನಡುವೆ ಪಕ್ಷದ ಪ್ರಧಾನ ಕಚೇರಿಯ ಹೊರಗಡೆ ಸೋಮವಾರ ಘರ್ಷಣೆ ನಡೆದಿದೆ. ಪಕ್ಷದ ಬಾವುಟ ಹಿಡಿದಿರುವ ಎರಡು ಬಣಗಳ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಲಾಗಿದೆ. ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದು, ಪಕ್ಷದ ಕಚೇರಿ ಪಕ್ಕದಲ್ಲಿ ನಿಲ್ಲಿಸಿದ್ದ ಕೆಲ ವಾಹನಗಳು ಸಹ ಜಖಂ ಆಗಿವೆ.

ತಮಿಳುನಾಡಿನ ಎಐಎಡಿಎಂಕೆಯಲ್ಲಿ ಸೃಷ್ಟಿಯಾಗಿರುವ ಬಣ ಜಗಳ ಜೋರಾಗುತ್ತಿದೆ. ಮಾಜಿ ಸಿಎಂ ಪಳನಿಸ್ವಾಮಿ ಮತ್ತು ಮಾಜಿ ಡಿಸಿಎಂ ಪನ್ನೀರಸೆಲ್ವಂ ಬಣಗಳು ಇವತ್ತು ಮತ್ತೆ ಕಚೇರಿ ಎದುರೇ ಬಡಿದಾಡಿಕೊಂಡಿವೆ. ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಚೆನ್ನೈನ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಪಕ್ಷದ ಮುಂದಾಳತ್ವದ ವಿಚಾರವಾಗಿ ಕಚ್ಚಾಡಿಕೊಂಡಿದ್ದಾರೆ. ಪರಸ್ಪರ ಇಬ್ಬರು ನಾಯಕರ ಪೋಸ್ಟರ್​ಗಳನ್ನು ಕಾರ್ಯಕರ್ತರು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಜಯಲಲಿತಾ ನಿಧನ ನಂತರ ಎಐಡಿಎಂಕೆ ನಾಯಕರಿಲ್ಲದೇ ಒಡೆದ ಮನೆಯಾಗಿದೆ. ಪ್ರಧಾನಕಾರ್ಯದರ್ಶಿ ಪಟ್ಟಕ್ಕಾಗಿ ಪನ್ನೀರ ಸೆಲ್ವಂ ಮತ್ತು ಪಳನಿಸ್ವಾಮಿ ನಡುವೆ ಫೈಟ್ ನಡೆಯುತ್ತಿದೆ. ಸಾಮಾನ್ಯ ಸಭೆ ಹೈಕೋರ್ಟ್​ ಮೆಟ್ಟಿಲೇರಿತ್ತು. ಸಭೆ ನಡೆಸಲು ಕೋರ್ಟ್ ಪನ್ನೀರ್​ ಸೆಲ್ವಂಗೆ ಅವಕಾಶ ನೀಡಿದೆ.

Edited By : Manjunath H D
PublicNext

PublicNext

11/07/2022 05:57 pm

Cinque Terre

108.76 K

Cinque Terre

4