ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿಯುನಲ್ಲಿ ಕಾಂಗ್ರೆಸ್ ಶೂನ್ಯ-13 ಕ್ಷೇತ್ರದಲ್ಲೂ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿ!

ದಿಯು: ಭಾರತೀಯ ಜನತಾ ಪಕ್ಷ ದಿಯು ನಲ್ಲು ಭಾರೀ ಜಯಭೇರಿ ಬಾರಿಸಿದೆ.ಮೊನ್ನೆ ಜುಲೈ-07 ರಂದು ದಿಯು ಮುನ್ಸಿಪಲ್ ಕೌನ್ಸಿಲ್‌ ನಲ್ಲಿ ಚುನಾವಣೆ ನಡೆದಿತ್ತು. ದಿಯು ಮತ್ತು ಧಮನ್ ಪೈಕಿ ದಿಯು ನಲ್ಲಿ ಬಿಜೆಪಿ ಬರೋಬ್ಬರಿ 13 ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಬಿಜೆಪಿ ಇಲ್ಲಿ ಭಾರೀ ಜಯಗಳಿಸಿದ್ದು,ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಗೆಲ್ಲದೆ ಮುಖಭಂಗವಾಗಿದೆ. ಈ ಹಿಂದೇನೆ ಬಿಜೆಪಿ ಇಲ್ಲಿ 6 ಸ್ಥಾನಗಳನ್ನ ಅವಿರೋಧವಾಗಿಯೇ ಗೆದ್ದಿತ್ತು. ಆದರೆ, ಜುಲೈ-07 ರಂದು ಬಾಕಿ ಉಳಿದಿದ್ದ 7 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಆದರೆ, ಬಿಜೆಪಿ ಇಲ್ಲಿ ಕಳೆದ ಒಂದೂವರೆ ದಶಕದಿಂದಲೇ ಅಧಿಕಾರಕ್ಕೆ ಬಂದಿರಲಿಲ್ಲ. ಈಗ ಭರ್ಜರಿ ಜಯಗಳಿಸಿ ಎಲ್ಲ ಸ್ಥಾನಗಳನ್ನ ಗೆದ್ದು ಹೊಸ ಇತಿಹಾಸವನ್ನೆ ಬರೆದಿದೆ.

Edited By :
PublicNext

PublicNext

11/07/2022 10:02 am

Cinque Terre

44.39 K

Cinque Terre

26