ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಪರಮೇಶ್ವರ್ ಡಿಕೆಶಿ ಭೇಟಿ, ಚುನಾವಣಾ ರಣತಂತ್ರ ಕುರಿತು ಚರ್ಚೆ

ಬೆಂಗಳೂರು: ಭಾನುವಾರ ಅಂದ್ರೆ ಬಿಡುವಿನ ದಿನ ಆದರೆ ಮಾಜಿ ಡಿಸಿಎಂ ಮತ್ತು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದರೆಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಮುಂಬರುವ ದಿನದಲ್ಲಿ ಪಕ್ಷ ಸಂಘಟನೆ ಹೇಗಿರಬೇಕು.... ಯಾವ ರೀತಿ ಕಾರ್ಯ ಯೋಜನೆಯನ್ನು ರೂಪಿಸಬೇಕು... ಎನ್ನುವ ಹಲವು ಮಹತ್ವದ ಚರ್ಚೆಗಳನ್ನು ಕೆಲವು ಗಂಟೆಗಳ ಕಾಲ ನಡೆಸಿದ್ದು ಹಾಲಿ ಮತ್ತು ಮಾಜಿ ಕೆಪಿಸಿಸಿ ಅಧ್ಯಕ್ಷರು ಭೇಟಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಚುಕ್ಕಾಣಿ ಹಿಡಿಯಲು ಹಲವು ರಣತಂತ್ರ ರೂಪಿಸುವ ಚರ್ಚೆಯನ್ನು ನಡೆಸಲಾಯಿತು ವರದಿಗಳು ಹರಿದಾಡುತ್ತಿದೆ.

Edited By :
PublicNext

PublicNext

10/07/2022 05:29 pm

Cinque Terre

32.74 K

Cinque Terre

2