ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿದೆ. ಇಲ್ಲಿಯ ಜನ ಕೂಡ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅದರಂತೆ ಇಂದು ರಾಜಪಕ್ಸೆ ಮನೆ ಸುತ್ತ ಪ್ರತಿಭಟನಾಕಾರರು ಸುತ್ತುವರೆದಿದ್ದರು.ಆಗಲೇ ಅಧ್ಯಕ್ಷ ರಾಜಪಕ್ಸೆ ಓಡಿ ಹೋಗಿದ್ದಾರೆ.
ಹೌದು. ಕೊಲಂಬೊದಲ್ಲಿರೋ ಅಧ್ಯಕ್ಷರ ಭವನದ ಬಳಿ ಪ್ರತಿಭಟನಾಕಾರರು ಸುತ್ತು ಒರೆದಿದ್ದರು. ಬ್ಯಾರಿಕೇಡ್ ತಳ್ಳಿ ಮನೆಯೊಳಗೂ ನುಗ್ಗಲು ಪ್ರಯತ್ನಿಸಿದರು.
ಆದರೆ, ಈ ಸಮಯದಲ್ಲಿ ಭದ್ರತಾ ಸಿಬ್ಬಂದಿ ಟೀಯರ್ ಗ್ಯಾಸ್ ಪ್ರಯೋಗ ಮಾಡಿದರು. ನೀರಿನ ಫಿರಂಗಿಯ ಪ್ರಯೋಗ ಕೂಡ ಮಾಡಿದರು. ಈ ಎಲ್ಲ ಬೆಳವಣಿಗೆ ಮಧ್ಯೇನೆ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮನೆಯಿಂದಲೇ ಓಡಿ ಹೋದರು ಎಂದು ವರದಿ ಕೂಡ ಆಗಿದೆ.
PublicNext
09/07/2022 03:16 pm