ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್ ಹೆಸರನ್ನು ಭಾಗ್ಯನಗರ ಮಾಡ್ತಾರಾ ಬಿಜೆಪಿಗರು?...

ಹೈದರಾಬಾದ್: ಎರಡು ದಿನಗಳ ಕಾಲ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ ಪ್ರಧಾನಿ ನರೇಂದ್ರ ಮೋದಿ ಇಂದು ತೆಲಂಗಾಣ ರಾಜಧಾನಿ ʻಹೈದರಾಬಾದ್ʼ ಅನ್ನು ʻಭಾಗ್ಯನಗರʼ ಎಂದು ಉಲ್ಲೇಖಿಸಿದ್ದಾರೆ.

ʻಸ್ವಾತಂತ್ರ್ಯ ಹೋರಾಟಗಾರರ ಐಕಾನ್ ಸರ್ದಾರ್ ಪಟೇಲ್ ಅವರು 'ಏಕ್ ಭಾರತ್' ಎಂಬ ಪದವನ್ನು ಸೃಷ್ಟಿಸಿದ್ದು ಭಾಗ್ಯನಗರದಲ್ಲಿ, ಹೈದರಾಬಾದ್ ಭಾಗ್ಯನಗರ ನಮಗೆಲ್ಲರಿಗೂ ಮಹತ್ವದ್ದಾಗಿದೆʼ ಎಂದಿದ್ದಾರೆ. ಸರ್ದಾರ್ ಪಟೇಲ್ ಅಖಂಡ ಭಾರತದ ಅಡಿಪಾಯವನ್ನು ಉಳಿಸಿಕೊಂಡರು ಮತ್ತು ಈಗ ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ಬಿಜೆಪಿಯ ಮೇಲಿದೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೈದರಾಬಾದ್ನಲ್ಲಿ ಪ್ರಧಾನಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ಬಿಜೆಪಿಯ ಸೈದ್ಧಾಂತಿಕ ಚಿಲುಮೆಯಾದ ಆರ್ ಎಸ್ ಎಸ್ ಮತ್ತು ಹಲವಾರು ಬಿಜೆಪಿ ನಾಯಕರು ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಸದ್ಯ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, 'ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಗಳು ಸಂಪುಟ ಸಹೋದ್ಯೋಗಿಗಳೊಂದಿಗೆ ಅದನ್ನು ನಿರ್ಧರಿಸುತ್ತಾರೆʼ ಎಂದಿದ್ದಾರೆ.

Edited By : Nirmala Aralikatti
PublicNext

PublicNext

03/07/2022 08:45 pm

Cinque Terre

69.29 K

Cinque Terre

23

ಸಂಬಂಧಿತ ಸುದ್ದಿ