ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂರಾರು ಕೋಟಿ ಬೆಲೆ ಹುಬ್ಬಳ್ಳಿಯ ಕಿರ್ಲೋಸ್ಕರ್ ಜಾಗೆ ಗುಳುಂ : ಪಕ್ಷಭೇದವಿಲ್ಲದ ಫಲಾನುಭವಿಗಳು

ಹುಬ್ಬಳ್ಳಿ : ಹಲವು ದಶಕಗಳ ಹಿಂದೆ ಸಹಸ್ರಾರು ಕೈಗಳಿಗೆ ಉದ್ಯೋಗ ನೀಡಿ, ಇತಿಹಾಸದ ಗರ್ಭಕ್ಕೆ ಸೇರಿರುವ ಕಿರ್ಲೋಸ್ಕರ್ ಕಂಪನಿ ಈಗ ಕೆಲವು ದಿನಗಳಿಂದ ಮತ್ತೇ ಭಾರಿ ಸುದ್ದಿಯಲ್ಲಿದೆ.

ಅದೇ ಜಾಗದಲ್ಲಿ ಮತ್ತೇ ಯಾವುದಾದರೂ ಕಂಪನಿ ಬರುತ್ತೆ, ನಿರುದ್ಯೋಗಿಗಳ ಬದುಕಿಗೆ ಆಧಾರವಾಗುತ್ತೆ ಎಂದು ಊಹಿಸಿದ್ದೀರಾ?

ಖಂಡಿತ ಇಲ್ಲ, ಈಗ ಅದು ಮತ್ತೆ ಸುದ್ದಿಯಲ್ಲಿರಲು ಕಾರಣವೆಂದರೆ, ನೂರಾರು ಕೋಟಿ ಬೆಲೆಯ ಸುಮಾರು 83 ಎಕರೆ ಭೂಮಿಯನ್ನು ಪಕ್ಷ ಭೇದ ಮರೆತು ಕೆಲವು ರಾಜಕಾರಣಿಗಳು ನುಂಗಿ ಹಾಕಲು ಸಜ್ಜಾಗಿರುವುದು.

ಅವಳಿ ನಗರದಲ್ಲಿ ಈಗಾಗಲೇ ಅನೇಕ ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿರುವ ರೀಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಮಾಜಿ ಸಚಿವರೊಬ್ಬರ ಸಂಬಂಧಿ ಹಾಗೂ ಇನ್ನೂ ಕೆಲವರು ಈ ನೂರಾರು ಕೋಟಿ ಬೆಲೆ ಭೂಮಿಯ ಫಲಾನುಭವಿಗಳು.

ಆಶ್ಚರ್ಯವೆಂದರೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಂತ ಕಿತ್ತಾಡಿ ಮತದಾರರನ್ನು ಮೂರ್ಖರನ್ನಾಗಿ ಮಾಡುವ ಕೆಲವು ರಾಜಕಾರಣಿಗಳು ಪಕ್ಷ ಭೇದ ಮರೆತು, ರಾತೋ ರಾತ್ರಿ ಈ ಭಾರಿ ಡೀಲ್ ಮುಗಿಸಲು ಪ್ಲ್ಯಾನ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಆದರೆ, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಟ ಈ 83 ಎಕರೆ ಜಮೀನು ಕಬಳಿಕೆ ವಿರುದ್ಧ ಸಮರ ಸಾರಿರುವುದು, ಇದರ ಫಲಾನುಭವಿಗಳಿಗೆ ಬಿಸಿ ತುಪ್ಪವಾಗಿದೆ.

ಸಚಿವ ಮುನೇನಕೊಪ್ಪ ಅವರು ಕಳೆದ ಮಾರ್ಚ ತಿಂಗಳಲ್ಲಿಯೇ ಸರಕಾರಕ್ಕೆ ಪತ್ರ ಬರೆದು, ಭೂಮಿ ಪರಭಾರೆ ಮಾಡದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಒತ್ತಾಯಿಸಿರುವುದನ್ನು ನೋಡಿದರೆ ಈ ಡೀಲ್ ದಲ್ಲಿ ಪ್ರಭಾವಿ ರಾಜಕಾರಣಿಗಳು, ಅವರ ಸಹೋದರ ಸಂಬಂಧಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ತಮ್ಮೆಲ್ಲ ಕಂಪನಿಗಳನ್ನು ಬಂದ್ ಮಾಡಿ ಇಲ್ಲಿಂದ ಕಾಲು ಕಿತ್ತಿರುವ ಕಿರ್ಲೋಸ್ಕರ ಸಂಸ್ಥೆ ಅಧಿಕಾರಿಗಳು, ಈ ವ್ಯವಹಾರದಲ್ಲಿ ತಮ್ಮ ಪಾಲು ಬಂದರೆ ಸಾಕು ಎನ್ನುವ ರೀತಿಯಲ್ಲಿ ಈ ಡೀಲ್ ದಲ್ಲಿ ಸಹಕರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂತಹ ತೆರೆಮರೆಯ ಡೀಲ್ ಗಳು ಉನ್ನತ ಅಧಿಕಾರಿಗಳ ಅಭಯ ಹಸ್ತವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂಬುದು ಜಗಜ್ಜಾಹಿರು. ಮೇಲಿನಿಂದ ಕೆಳಹಂತದವರೆಗಿನ ಎಲ್ಲ ಅಧಿಕಾರಿಗಳ ಸಹಕಾರದಿಂದಲೇ ಈ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಸಚಿವ ಮುನೇನಕೊಪ್ಪ ಅವರೂ ಸಹ ತಮ್ಮ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ ಎಂಬುದು ಗಮನಾರ್ಹ.

ಚಿನ್ನದಂತಹ ಕಿರ್ಲೋಸ್ಕರ್ ಭೂಮಿಯನ್ನು ರಕ್ಷಿಸುವುದು ಹುಬ್ಬಳ್ಳಿಯವರೇ ಆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜವಾಬ್ದಾರಿ. ಈ ವ್ಯವಹಾರದಲ್ಲಿ ಭಾಗಿಯಾದವರು ತಮ್ಮ ಪಕ್ಷದವರೆ ಆಗಲಿ, ಇನ್ನಾರೆ ಆಗಲಿ ಅಂಥವರಿಗೆ ಸೂಕ್ತ ಎಚ್ಚರಿಕೆ ರವಾನಿಸಬೇಕು. ಯಾವುದೇ ರೀತಿ ಮಾರಾಟ, ಲೀಸ್ ದಂತಹ ಪ್ರಕ್ರಿಯೆಗೆ ಮುಂದಾಗದಂತೆ ಜಿಲ್ಲಾಧಿಕಾರಿಗಳಿಗೆ ಅದೇಶಿಸಬೇಕೆಂಬುದು ನಗರದ ಜನತೆ ಕಳಕಳಿಯಾಗಿದೆ.

Edited By :
PublicNext

PublicNext

03/07/2022 12:36 pm

Cinque Terre

95.41 K

Cinque Terre

15

ಸಂಬಂಧಿತ ಸುದ್ದಿ