ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಆಂತರಿಕ ಸಮೀಕ್ಷೆ : ಲೇವಡಿ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 120 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂಬ ಆಂತರಿಕ ಸಮೀಕ್ಷೆ ಬಗ್ಗೆ ಸಿಎಂ ವ್ಯಗ್ಯವಾಡಿದ್ದಾರೆ.ಹೌದು ಕಾಂಗ್ರೆಸ್ ನವರು ಬಿಜೆಪಿ ಬಹುಮತ ಬರತ್ತೆ ಅಂತ ತೋರಿಸೋಕೆ ಆಗಲ್ಲ ಅದಕ್ಕೆ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲತ್ತೆ ಎಂದು ವರದಿ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮಂಗಳವಾರ ಆರ್ ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಇದೀಗ ಗೆಲುವಿನ ಲೆಕ್ಕಾಚಾರ ಆರಂಭಿಸಿವೆ.

ಆಂತರಿಕ ಸಮೀಕ್ಷೆಗೆ ಇಳಿದಿವೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಬಿಜೆಪಿ ಎಷ್ಟು ಸ್ಥಾನಗಳು ಗೆಲ್ಲಲಿದೆ ಎಂಬುದರ ಬಗ್ಗೆ ಮೂರು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡಿದ್ದಾರೆ. ಬಿಜೆಪಿ ಕಡಿಮೆ ಸೀಟು ಗೆಲ್ಲಲಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಇದೀಗ ಟಾರ್ಗೆಟ್ 150 ಪ್ಲಾನ್ ರೂಪಿಸಿ ಹೊಸ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ರಾಜ್ಯದಲ್ಲಿ ಚುನಾವಣೆ ನಡೆದರೆ ಆಡಳಿತ ರೂಢ ಬಿಜೆಪಿ ಕೇವಲ 70 ಸ್ಥಾನದಲ್ಲಿ ಗೆಲ್ಲಲಿದೆ ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಅದು ಕಾಂಗ್ರೆಸ್ ಪಕ್ಷದ ಸಮೀಕ್ಷೆ. ಅವರದ್ದು ಜಾಸ್ತಿ ತೋರಿಸಿಕೊಳ್ಳದೇ ಬಿಜೆಪಿ ಜಾಸ್ತಿ ಸ್ಥಾನ ಗೆಲ್ಲುತ್ತೆ ಅಂತ ಹೇಳೋಕೆ ಆಗುತ್ತಾ ? ಎಂದು ಲೇವಡಿ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

30/06/2022 09:46 pm

Cinque Terre

78.29 K

Cinque Terre

6