ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರ ಪತನದ ಹೊತ್ತಲ್ಲಿ ಮತ್ತೆ ಹಿಂದುತ್ವದತ್ತ ಶಿವಸೇನೆ ಮುಖ: ಔರಂಗಾಬಾದ್​ ಆಗಲಿದೆಯೇ ಸಂಭಾಜಿನಗರ?

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ತೀವ್ರತರದ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಲ್ಲೇ ನಗರದ ಹೆಸರು ಬದಲಾವಣೆ ಮತ್ತೆ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಇನ್ನೇನು ಬೀಳಲಿದೆ ಎಂಬ ಸ್ಥಿತಿಯಲ್ಲಿರುವಾಗಲೇ ರಾಜ್ಯದ ಪ್ರಮುಖ ನಗರವೊಂದರ ಹೆಸರು ಬದಲಾವಣೆ ಮಾಡುವ ಒತ್ತಾಯ ಕೇಳಿಬಂದಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೇತೃತ್ವದ ಅಘಾಡಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಮಹಾರಾಷ್ಟ್ರದ ಪ್ರಮುಖ ನಗರಗಳ ಹೆಸರು ಮರುನಾಮಕರಣ ಮಾಡಲಾಗಿದೆ. ಔರಂಗಬಾದ್​​ ಹೆಸರು ಸಂಭಾಜಿ ನಗರ, ಉಸ್ಮಾನಾಬಾದ್​ ಹೆಸರನ್ನು ಧಾರಾಶಿವ ಎಂದು ಹೆಸರು ಬದಲು ಮಾಡಲಾಗಿದೆ.

ಮೊಘಲ್ ಆಡಳಿತದಲ್ಲಿ ಔರಂಗಜೇಬ್ ಇಂದಿನ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಔರಂಗಾಬಾದ್ ನಗರವನ್ನು ಸ್ಥಾಪಿಸಿದ್ದ. ಶಿವಸೇನೆಯು ಗೌರವಿಸುವ ಛತ್ರಪತಿ ಸಂಭಾಜಿಯವರನ್ನು ಗಲ್ಲಿಗೇರಿಸುವಂತೆಯೂ ಆದೇಶ ನೀಡಲಾಗಿತ್ತು. 1980 ರ ದಶಕದ ಉತ್ತರಾರ್ಧದಲ್ಲಿ, ಔರಂಗಾಬಾದ್ ಮುಂಬೈ-ಥಾಣೆ ಬೆಲ್ಟ್‌ನ ಹೊರಗಿನ ಮೊದಲ ಪ್ರಮುಖ ನಗರಗಳಲ್ಲಿ ಒಂದಾಗಿತ್ತು ಎಂದು ಹೇಳಲಾಗಿದೆ.

ನವಿ ಮುಂಬೈ ಏರ್‌ಪೋರ್ಟ್​ಗೆ ಡಿ.ವಿ ಪಾಟೀಲ್​​ ಹೆಸರು ಇಡಲಾಗಿದೆ. ಈ ಹಿಂದೆ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಹೆಸರು ಏರ್‌ಪೋರ್ಟ್​ಗೆ ಇಡಲು ಸರ್ಕಾರ ನಿರ್ಧಾರ ಮಾಡಿತ್ತು. ಆದರೀಗ ತೀವ್ರ ವಿರೋಧದ ಬಳಿಕ ನವಿ ಮುಂಬೈ ಏರ್‌ಪೋರ್ಟ್​ಗೆ ಡಿ.ವಿ ಪಾಟೀಲ್​​ ಹೆಸರು ಇಡಲಾಗಿದೆ.

ಇನ್ನು, ಪುಣೆಗೂ ಜೀಜಾಹೋ ನಗರ ಎಂದು ಹೆಸರಿಡಲಾಗಿದೆ. ಕೊನೇ ಕ್ಷಣದಲ್ಲಿ ಮತ್ತೆ ಹಿಂದುತ್ವದ ಮುಖ ಮಾಡಿರೋ ಶಿವಸೇನೆ ಸರ್ಕಾರ ಇನ್ನಷ್ಟು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

Edited By : Vijay Kumar
PublicNext

PublicNext

29/06/2022 07:29 pm

Cinque Terre

68.43 K

Cinque Terre

8