ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟ : ಕಾರಜೋಳ ಪುತ್ರನಿಗೆ ಹ್ಯಾಪಿ ಬರ್ಥ್ ಡೇ ವಿಶ್ ಪೊಲೀಸ್ ಅಧಿಕಾರಿಗಳು

ಬಾಗಲಕೋಟ: ಕೆಲವು ಪೊಲೀಸರಿಗೆ ರಾಜಕಾರಣಿಗಳನ್ನು ಓಲೈಸುವುದೆಂದರೆ ಎಲ್ಲಿಲ್ಲ ಪ್ರೀತಿ.

ಸಮವಸ್ತ್ರದ ಮೇಲೆ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಈ ಹಿಂದೆ ಪೊಲೀಸ್ ಮಹಾನಿರ್ದೇಶಕರು ಆದೇಶ ನೀಡಿದ್ದರೂ ಇವರು ಕ್ಯಾರೇ ಅನ್ನುತ್ತಿಲ್ಲ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರ‌ ಅರುಣ ಕಾರಜೋಳ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಸಮವಸ್ತ್ರ ಧರಿಸಿರುವ ಪೊಲೀಸ್‌ ಸಿಬ್ಬಂದಿ ಭಾಗವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಓರ್ವ ಅಧಿಕಾರಿಗ ಸಿಹಿ ತಿನ್ನಿಸುತ್ತಿರುವ ಪೋಟೊಗಳು ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಬಾಗಲಕೋಟ ಜಿಲ್ಲೆಯ ಮುಧೋಳ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಮುಧೋಳದ ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಸಂಗಮೇಶ ಹೊಸಮನಿ ಹಾಗೂ ಲೋಕಾಪುರ ಪಿಎಸ್‌ಐ ಶಿವಶಂಕರ್ ಮುಕರಿ ಸಮವಸ್ತ್ರದಲ್ಲೇ ಭಾಗವಹಿಸಿ ಶುಭ ಕೋರಿದ್ದರು.

ಈ ಫೋಟೊಗಳನ್ನು ಅರುಣ ಕಾರಜೋಳ ಅವರು ತಮ್ಮ ಫೇಸ್‌ಬುಕ್‌ ದಲ್ಲಿ ಹಾಕಿಕೊಂಡಿದ್ದಾರೆ.

ಪೊಲೀಸ್ ಸಿಬ್ಬಂದಿಗೂ ಖಾಸಗಿ ಬದುಕಿದೆ, ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕಾಗುತ್ತೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹೀಗೆ ಪೊಲೀಸ್ ಸಮವಸ್ತ್ರದಲ್ಲಿ ಪಾಲ್ಗೊಳ್ಳುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

Edited By :
PublicNext

PublicNext

27/06/2022 11:25 am

Cinque Terre

27.05 K

Cinque Terre

2