ನವದೆಹಲಿ: 'ವಿಚಾರಣೆ ನಡೆಸುವಾಗ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನನ್ನ ತಾಳ್ಮೆ ಕಂಡು ದಂಗಾಗಿದ್ದರು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ನಾನು ಸಹನೆಯಿಂದ ಉತ್ತರಿಸಿದ್ದೇನೆ. ಇದಕ್ಕೆ ಪ್ರತಿಯಾಗಿ ಇ.ಡಿ ಅಧಿಕಾರಿಗಳು 'ನಿಮ್ಮ ತಾಳ್ಮೆಯ ಗುಟ್ಟೇನು?' ಎಂದು ಕೇಳಿದ್ದಾರೆ ಎಂದು ಹೇಳಿದ್ದಾರೆ.
ಆದರೆ ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಇ.ಡಿ ಅಧಿಕಾರಿ ಮೂಲಗಳು ಅಲ್ಲಗೆಳೆದಿವೆ. ‘5 ದಿನ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ವಾಸ್ತವವಾಗಿ ಅಧಿಕಾರಿಗಳು ಕೇಳಿದ ಶೇ.20ರಷ್ಟು ಪ್ರಶ್ನೆಗೆ ‘ನಾನು ತುಂಬಾ ದಣಿದಿದ್ದೇನೆ’ ಎಂದು ನೆಪವೊಡ್ಡಿ ಉತ್ತರ ನೀಡುವುದರಿಂದ ತಪ್ಪಿಸಿಕೊಂಡರು.
PublicNext
26/06/2022 07:48 am