ಮುಂಬ:ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎದ್ದು ಬಿಟ್ಟಿದೆ.ಆದರೆ, ಇದೇ ಬಿರುಗಾಳಿಗೊಂದು ಟ್ವಿಸ್ಟ್ ಸಿಕ್ಕಿದೆ. ಶಿವಸೇನಾ ಬಂಡಾಯ ನಾಯಕ ಏಕನಾಥ್ ಸಿಂಧೆ ಜೊತೆಗೆ ಹೋಗಿದ್ದರೆನ್ನಲಾದ ಇಬ್ಬರು ಶಾಸಕರು ಈಗ ಉದ್ಧವ್ ಠಾಕ್ರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಹೌದು.ಶಿವಸೇನೆಯ ಇಬ್ಬರು ಶಾಸಕರಾದ ನಿತಿನ್ ದೇಶ್‌ಮುಖ್ ,ಕೈಲಾಶ್ ಪಾಟೀಲ್ ತಮ್ಮ ಬೆಂಬಲವನ್ನ ಸಿಎಂ ಉದ್ಧವ್ ಠಾಕ್ರೆಗೆ ಕೊಟ್ಟಿದ್ದಾರೆ.
ಶಿವಸೇನಾನದ ಈ ಶಾಸಕರನ್ನ ಅಪರಿಹರಿಸಿ, ಗುಜರಾತ್ ನ ಸೂರತ್ ಕರೆದೊಯ್ಯಲ್ಲಾಗಿತ್ತು.ಅಲ್ಲಿಂದ ತಪ್ಪಿಸಿಕೊಂಡು ಲಾರಿ ಹತ್ತಿಕೊಂಡು ಬಂದಿದ್ದೇವೆ ಅಂತಲೇ ಈ ಶಾಸಕರು ಹೇಳಿದ್ದಾರೆ.
ನಾನು ತಪ್ಪಿಸಿಕೊಂಡು ಬೆಳಗ್ಗೆ 3 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದೆ.ದಾರಿಹೋಕರ ಸಹಾಯಕ್ಕಾಗಿಯೇ ನಿಂತಿದ್ದೆ. ಆಗ ಪೊಲೀಸರು ಬಂದು ನನ್ನ ಆಸ್ಪತ್ರೆಗೆ ಕರೆದೊಯ್ದರು. ನನಗೆ ಹೃದಯಾಘಾತವಾಗಿದೆ ಅಂತಲೇ ಹೇಳಿ ಇಲ್ಲಿ ವೈದ್ಯಕೀಯ ಪರೀಕ್ಷೆ ಶುರು ಮಾಡಲು ಪ್ರಯತ್ನಿಸಿದರು.
ಆದರೆ, ನನಗೆ ಯಾವುದೇ ತೊಂದರೆನೂ ಆಗಲಿಲ್ಲ. ಆದರೂ ಬಲವಂತವಾಗಿಯೇ ನನ್ನ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದರು. ಬಲವಂತವಾಗಿಯೂ ಕೆಲವು ಇಂಜೆಕ್ಷನ್ ಕೂಡ ಕೊಟ್ಟಿದ್ದಾರೆಂದು ನಿತಿನ್ ದೇಶ್‌ಮುಖ್ ದೂರಿದ್ದಾರೆ.
PublicNext
22/06/2022 08:05 pm