ಪಾಟ್ನಾ: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ಡಿಎ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ. ಜಾರ್ಖಂಡ್ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ. ಈ ಹಿನ್ನೆಲೆ ದ್ರೌಪದಿ ಮುರ್ಮು ಅವರು ಇಂದು ಬೆಳಗ್ಗೆ ಬಿಹಾರದ ರಾಯರಂಗಪುರದ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯವನ್ನ ಗುಡಿಸಿ, ಸ್ವಚ್ಛಗೊಳಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದರು.
ಕುಟುಂಬದ ಸದಸ್ಯರೊಂದಿಗೆ ದೇಗುಲಕ್ಕೆ ಬಂದ ಅವರು ಪೂಜೆಗೂ ಮುನ್ನ ದೇವಸ್ಥಾನದ ಪ್ರಾಂಗಣವನ್ನು ಸ್ವಚ್ಛಗೊಳಿಸಿದರು. ಬಳಿಕ ಅಲ್ಲಿಯೇ ಇದ್ದ ನಂದಿ ಪ್ರತಿಮೆಗೆ ಮುತ್ತಿಟ್ಟು ನಮಸ್ಕರಿಸಿದರು.
ಸದ್ಯದ ಪರಿಸ್ಥಿತಿ ಗಮನಿಸುವುದಾದರೆ ದ್ರೌಪದಿ ಮುರ್ಮು ಅವರು ದೇಶದ ಮೊದಲ ಪ್ರಜೆ ಆಗುವುದು ನಿಶ್ಚಯವಾಗಿದ್ದು, ಒಂದು ವೇಳೆ ಆಗಿದ್ದೇ ಆದಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಮೊದಲ ಆದಿವಾಸಿ ಮಹಿಳೆ ಎನ್ನುವ ಕೀರ್ತಿ ಅವರದ್ದಾಗಲಿದೆ.
PublicNext
22/06/2022 01:32 pm