ಬೆಂಗಳೂರು: ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಕೈಗೊಂಡ ಜಾಣತನದಿಂದಾಗಿ ಇಂದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ವೊಂದು ಸದ್ದು ಮಾಡುತ್ತಿದೆ. ‘BJP ಜಾತಿವಾದಿ ಅಲ್ಲ, ರಾಷ್ಟ್ರವಾದಿ’ ಎನ್ನುವ ಟ್ರೆಂಡಿಂಗ್ ಶುರುವಾಗಿದೆ. ಹೌದು
ರಾಷ್ಟ್ರಪತಿ ಭವನದಲ್ಲಿ ತನ್ನ ಆಯ್ಕೆಯ ರಾಷ್ಟ್ರಪತಿ ಅಭ್ಯರ್ಥಿ ವಿಚಾರದಲ್ಲಿ ಬಿಜೆಪಿ ಜಾಣ ನಡೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಿಜೆಪಿಗೆ ಈವರೆಗೂ ಮೂರು ಬಾರಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿತ್ತು.ಈ ಮೂರೂ ಬಾರಿಯೂ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
2002ರಲ್ಲಿ ಮೊದಲ ಬಾರಿಗೆ ಈ ಅವಕಾಶ ಎದುರಿಗೆ ಬಂದಾಗ ಮುಸ್ಲಿಂ ಆಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು, 2017ರಲ್ಲಿ ದಲಿತರಾಗಿದ್ದ ರಾಮನಾಥ ಕೋವಿಂದ್, ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ರಾಷ್ಟ್ರಪತಿ ಆಯ್ಕೆ ಮಾಡುವ ಅವಕಾಶ ಸಿಕ್ಕಾಗ, ಅಚ್ಚರಿ ಎನ್ನುವಂತೆ ಆದಿವಾಸಿ ಮಹಿಳೆ, ಜಾರ್ಖಂಡ್ ನ ಮಾಜಿ ಗವರ್ನರ್ ಆಗಿದ್ದ 64 ವರ್ಷದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ.
ಮೇಲ್ಜಾತಿ ಹಿಂದೂಗಳಿಗೆ ಮಾತ್ರವೇ ಪ್ರಾಧಾನ್ಯತೆ ನೀಡುವ, ದಲಿತ ಹಾಗೂ ಅಲ್ಪಸಂಖ್ಯಾತ ವಿರೋಧಿ ಎಂದೇ ಈವರೆಗೂ ಪರಿಗಣಿಸಲಾದ ಬಿಜೆಪಿಯ ರಾಷ್ಟ್ರಪತಿ ಆಯ್ಕೆ ಖಂಡಿತವಾಗಿಯೂ ಜನರ ಹುಬ್ಬೇರಿಸಿದೆ.
ಈ ಕುರಿತಾಗಿಯೇ ಹಲವರು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. "ರಾಷ್ಟ್ರಪತಿ ಹುದ್ದೆಗೆ ಬಿಜೆಪಿಯು ಕಲಾಂ (ಒಬ್ಬ ಮುಸ್ಲಿಂ) ಮತ್ತು ಕೋವಿಂದ್ (ಎ ದಲಿತ) ಮತ್ತು ಈಗ #ದ್ರೌಪದಿ ಮುರ್ಮು (ಬುಡಕಟ್ಟು ಮಹಿಳೆ) ಅವರನ್ನು ಬೆಂಬಲಿಸಿದೆ. ಆದರೂ ಬಿಜೆಪಿಯನ್ನು ದಲಿತ ವಿರೋಧಿ ಮುಸ್ಲಿಂ ವಿರೋಧಿ ಮತ್ತು ಮಹಿಳಾ ವಿರೋಧಿ ಎಂದು ಕರೆಯುತ್ತಾರೆ' ಎಂದು ಶರತ್ ಚಂದ್ರ (@sharath_haritas) ಎನ್ನುವ ವ್ಯಕ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
22/06/2022 08:37 am