ಹೊಸದಿಲ್ಲಿ : ಪ್ರಧಾನಿ ಮೋದಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡು ಲೇಖನವೊಂದರಲ್ಲಿಯ ಹೆಸರನ್ನು ಪ್ರಸ್ತಾಪಿಸಿ ಮೋದಿಗೆ ಕುಟುಕಿದ ಹೈದರಾಬಾದ ಸಂಸದ ಅಸಾದುದ್ದೀನ್ ಓವೈಸಿಯವರು "ಪ್ರವಾದಿ ಕುರಿತ ನೂಪುರ್ ಶರ್ಮಾ ಹೇಳಿಕೆಗಳು ಆಕ್ಷೇಪಾರ್ಹವಲ್ಲವೇ ಎಂದು ನಿಮ್ಮ ಸ್ನೇಹಿತ ಅಬ್ಬಾಸ್ರಲ್ಲಿ ಕೇಳಿ" ಎಂದಿದ್ದಾರೆ.
ಹೌದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ತಾಯಿಯ 99ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬ್ಲಾಗ್ ಲೇಖನದಲ್ಲಿ ತಮ್ಮ ಸ್ನೇಹಿತ ಅಬ್ಬಾಸ್ ರನ್ನು ನೆನಪಿಸಿಕೊಂಡಿದ್ದಾರೆ.
ಸದ್ಯ ಅಬ್ಬಾಸ್ ಅವರ ಹೆಸರು ಕೇಳಿದ ಅಸಾದುದ್ದೀನ್ ಉವೈಸಿಯವರು,ಪ್ರವಾದಿ ಮುಹಮ್ಮದ್ ರ ಕುರಿತು ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರ ಹೇಳಿಕೆಗಳು ಆಕೇಪಾರ್ಹವೇ ಅಲ್ಲವೇ ಎನ್ನುವುದನ್ನು ಪ್ರಧಾನಿಯವರು ತನ್ನ ಬಾಲ್ಯಸ್ನೇಹಿತನಲ್ಲಿ ಕೇಳಬೇಕು ಎಂದು ಹೇಳಿದ್ದಾರೆ.
'ಪ್ರಧಾನಿಯವರು ಎಂಟು ವರ್ಷಗಳ ಬಳಿಕ ತನ್ನ ಸ್ನೇಹಿತನನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಈ ಗೆಳೆಯ ಇರುವುದು ನಮಗೆ ಗೊತ್ತಿರಲಿಲ್ಲ. ಅಬ್ಬಾಸ್ ಅಸ್ತಿತ್ವದಲ್ಲಿದ್ದರೆ ಅವರಿಗೆ ಕರೆ ಮಾಡಿ ಅಸದುದ್ದೀನ್ ಉವೈಸಿ ಮತ್ತು ಉಲೇಮಾಗಳ ಭಾಷಣಗಳನ್ನು ಅವರಿಗೆ ಕೇಳಿಸಿ ಮತ್ತು ನಾವು ಸುಳ್ಳು ಹೇಳುತ್ತಿದ್ದೇವೆಯೇ ಎಂದು ಅವರನ್ನು ಪ್ರಶ್ನಿಸಿ' ಎಂದು ಮೋದಿಯವರಿಗೆ ಕುಟುಕಿರುವ ಓವೈಸಿ,'ನೀವು ಅಬ್ಬಾಸ್ ರ ವಿಳಾಸವನ್ನು ನೀಡಿದರೆ ನಾನೇ ಅವರ ಬಳಿಗೆ ಹೋಗುತ್ತೇನೆ.
ಪ್ರವಾದಿ ಮುಹಮ್ಮದ್ ರ ಕುರಿತು ನೂಪುರ್ ಶರ್ಮಾರ ಹೇಳಿಕೆಗಳು ಆಕೇಪಾರ್ಹವೇ ಅಲ್ಲವೇ ಎಂದು ನಾನು ಅವರನ್ನು ಪ್ರಶ್ನಿಸುತ್ತೇನೆ. ಅವರು ಅಸಂಬಂದ್ಧ ಮಾತುಗಳನ್ನಾಡಿದ್ದಾರೆ ಎನ್ನುವುದನ್ನು ಅಬ್ಬಾಸ್ ಒಪ್ಪಿಕೊಳ್ಳುತ್ತಾರೆ 'ಎಂದಿದ್ದಾರೆ.
PublicNext
21/06/2022 07:41 am