ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೂ ಅಭಿಮಾನಿಗಳಿದ್ದಾರೆ. ಇವರ ಅಪಾರ ಅಭಿಮಾನಕ್ಕೆ ಮನಸೋತ ಪ್ರಿಯಾಂಕಾ ಗಾಂಧಿ,ರಾಹುಲ್ ಅಭಿಮಾನಿಯನ್ನ ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಪ್ರತಿಭಟನಾ ಸ್ಥಳಕ್ಕೂ ಬಂದಿದ್ದಾರೆ.
ಹೌದು.ರಾಹುಲ್ ಚಿತ್ರ ಇರೋ ಬಟ್ಟೆಯನ್ ಧರಿಸಿದ್ದ, ರಾಹುಲ್ ಅಭಿಮಾನಿ, ರಾಹುಲ್ ಸಪೋಟರ್ ನನ್ನ ಕಂಡ ಪ್ರಿಯಾಂಕಾ ಗಾಂಧಿ, ತಕ್ಷಣವೇ ತಮ್ಮ ಕಾರ್ ಸ್ಟಾಪ್ ಮಾಡಿಸಿದ್ದಾರೆ.
ಆ ಅಭಿಮಾನಿಯನ್ನ ಕರೆಯಲು ಪೊಲೀಸರಿಗೂ ಮನವಿ ಮಾಡಿದ್ದಾರೆ. ಅಲ್ಲಿಗೆ ಪೊಲೀಸರು ರಾಹುಲ್ ಅಭಿಮಾನಿಯನ್ನ ಕರೆತಂದು ಕಾರ್ ವರೆಗೂ ಬಿಟ್ಟಿದ್ದಾರೆ. ಈ ವೀಡಿಯೋ ಈಗ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ರಾಹುಲ್ ಗಾಂಧಿ ಇಡಿ ವಿಚಾರ ಇಂದೂ ಮುಂದುವರೆದಿದೆ. ಇದನ್ನ ವಿರೋಧಿಸಿ ಕಾಂಗ್ರೆಸ್ ನಾಯಕರ ಹೋರಾಟವೂ ದೆಹಲಿಯ ಜಂತರ್-ಮಂತರ್ ನಲ್ಲಿ ಜೋರ್ ಆಗಿಯೇ ನಡೆಯುತ್ತಿದೆ. ಇಲ್ಲಿಗೆ ತೆರಳುವಾಗಲೇ, ಅಭಿಮಾನಿಯನ್ನ ಪ್ರಿಯಾಂಕಾ ಗಾಂಧಿ ತಮ್ಮ ಕಾರಿನಲ್ಲಿಯೇ ಕರೆದುಕೊಂಡು ಹೋಗಿದ್ದಾರೆ.
PublicNext
20/06/2022 05:42 pm