ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಕುಟುಂಬದವರನ್ನು ಜೂನ್ 20ರಂದು ಬೆಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ. ಖುದ್ದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ದೆಹಲಿಯ ಪ್ರಧಾನಿ ಕಾರ್ಯಾಲಯದಿಂದಲೇ ನವೀನ್ ತಂದೆ ಶೇಖರಪ್ಪ ಗ್ಯಾನಗೌಡರಿಗೆ ಕರೆ ಬಂದಿದೆ.
ಮಗನ ಕಳೆಬರಹ ನೋಡಲು ಅವಕಾಶ ಮಾಡಿಕೊಟ್ಟ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕೆಂದುಕೊಂಡಿದ್ದೆವು. ಅದು ಈಗ ಈಡೇರುತ್ತಿದೆ. ಅವರನ್ನು ಭೇಟಿಯಾದಾಗ ಧನ್ಯವಾದ ಹೇಳುತ್ತೇವೆ. ಜೊತೆಗೆ ಉಕ್ರೇನ್ ನಿಂದ ಬಂದಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಶೇಖರಪ್ಪ ತಿಳಿಸಿದ್ದಾರೆ.
ಜೂ. 20ಕ್ಕೆ ಬೆಂಗಳೂರಿಗೆ ಬರಲಿರುವ ಮೋದಿ ಅವರ ಜೊತೆ ಹತ್ತು ನಿಮಿಷಗಳ ಕಾಲ ಕುಟುಂಬದ ಸದಸ್ಯರ ಜೊತೆ ಚರ್ಚೆ ನಡೆಸಲಿದ್ದಾರೆ. ಪ್ರಧಾನಿ ಮೋದಿ ಕಾರ್ಯಾಲಯದಿಂದ ಕರೆ ಬಂದಿದೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಖುದ್ದು ಶೇಖರಪ್ಪ ಗ್ಯಾನಗೌಡರಿಗೆ ಫೋನ್ ಮಾಡಿ ಬೆಂಗಳೂರಿಗೆ ಬರುವಂತೆ ಮನವಿ ಮಾಡಿದ್ದಾರೆ. ಮೋದಿ ಅವರನ್ನು ಸೋಮವಾರ ಎಷ್ಟೊತ್ತಿಗೆ ಭೇಟಿ ಆಗಲಿದ್ದಾರೆ ಎಂಬ ಸಮಯ ನಿಗದಿಯಾಗಿಲ್ಲ. ಆದ್ರೆ ಶೇಖರಪ್ಪ, ಅವರಿಗೆ ಪತ್ನಿ ವಿಜಯಲಕ್ಷ್ಮೀ ಹಾಗೂ ಈ ದಂಪತಿ ಹಿರಿಯ ಪುತ್ರ ಹರ್ಷ ಅವರ ಜೊತೆ ಬರುವಂತೆಯೂ ಹೇಳಿದ್ದಾರೆ. ಇದಕ್ಕೆ ಒಪ್ಪಿರುವ ಶೇಖರಪ್ಪ ದಂಪತಿ ಬೆಂಗಳೂರಿಗೆ ಹೋಗಿದ್ದಾರೆ. ಪಿಹೆಚ್‌ಡಿ ವ್ಯಾಸಂಗ ಮಾಡುತ್ತಿರುವ ಹರ್ಷ ನಮ್ಮೊಟ್ಟಿಗೆ ಇರುತ್ತಾನೆ ಎಂದು ಹೇಳಿದರು.
PublicNext
19/06/2022 10:58 am