ಯಾದಗಿರಿ:ಕಾಂಗ್ರೆಸ್ ಪಕ್ಷದವರು ಬ್ಯಾರಿಕೇಡ್,ಕಾಂಪೌಂಡ್,ಮನೆ ಹಾರುವುದನ್ನ ಪ್ರಾಕ್ಟೀಸ್ ಮಾಡ್ತಿದ್ದಾರೆ ಎಂದು ಸುರಪುರ ಶಾಸಕ ರಾಜೂ ಗೌಡ ಲೇವಡಿ ಮಾಡಿದ್ದಾರೆ.
ಪರೋಕ್ಷವಾಗಿಯೇ ಡಿಕೆಶಿಗೆ ಟಾಂಗ್ ಕೊಟ್ಟ ಶಾಸಕ ರಾಜೂ ಗೌಡ, ಕಾಂಗ್ರೆಸ್ ಪಕ್ಷದ ಈ ಹೋರಾಟವನ್ನ ತೀವ್ರವಾಗಿಯೇ ವಿರೋಧಿಸಿದ್ದಾರೆ. ಇದು ಪ್ರತಿಭಟನೆಯೋ ಇಲ್ಲವೇ ಬ್ಯಾರಿಕೇಡ್ ಹಾರೋ ಸ್ಪರ್ಧೆಯೋ ಅಂತಲೇ ಪ್ರಶ್ನೆ ಕೂಡ ಮಾಡಿದ್ದಾರೆ.
ಕಾಂಗ್ರೆಸ್ ನಲ್ಲಿರೊ ವಯಸ್ಸಾದವ್ರು ವಯಸ್ಸಿದ್ದರೋ ಎಲ್ಲರೂ ಬ್ಯಾರಿಕೆಡ್ ಹಾರ್ತಾಯಿದ್ದಾರೆ. ಡಿಕೆಶಿ ಹೇಗೆ ಮಾಡ್ತಾರೋ ಎಲ್ಲರೂ ಹಾಗೆ ಮಾಡ್ತಿದ್ದಾರೆ ಎಂದು ರಾಜೂ ಗೌಡ ಚುಚ್ಚಿದ್ದಾರೆ.
PublicNext
17/06/2022 08:37 am