ಬೆಂಗಳೂರು: ರಾಹುಲ್ ಗಾಂಧಿ ಮೇಲೆ ಬಿಜೆಪಿ ನಿರಂತರ ಅತ್ಯಾಚಾರ ಮಾಡುತ್ತಿದೆ. ಇದನ್ನ ನಾವು ಸಹಿಸೋದಿಲ್ಲ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕಿಡಿಕಾರಿದ್ದಾರೆ. ಇದಕ್ಕೆ ಸರಣಿ ಟ್ವೀಟ್ ಮೂಲಕ ಉತ್ತರ ಟಾಂಗ್ ಕೊಟ್ಟ ಬಿಜೆಪಿ, ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು ಟೀಕಿಸಿದ್ದಾರೆ.
ಯಥಾರಾಜಾ ತಥಾ ಪ್ರಜಾ ಎಂಬೋದು ಕಾಂಗ್ರೆಸಿಗರಿಗೆ ಅನ್ವಯ ಆಗುತ್ತದೆ.ಕೋತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷರಾಗ್ತಾರೆ.ಗ್ಯಾಸ್ ಕಾಲೇಜಿನಲ್ಲಿ ಬ್ಲೇಡು,ಚಾಕು ಚೂರಿ ಹಿಡಿದು ಗೂಂಡಾಗಿರಿ ನಡೆಸುತ್ತಿದ್ದವ್ರು ಮೇಲ್ಮನೆ ವಿಪಕ್ಷದ ನಾಯಕ ಆಗ್ತಾನೆ ಎಂದು ಟ್ವಿಟರ್ ನಲ್ಲಿ ಟಾಂಗ್ ಕೊಟ್ಟಿದೆ ಬಿಜೆಪಿ.
ಇವರು ಜನರ ಪ್ರೀತಿಯಿಂದ ನಾಯಕರಾಗಿಲ್ಲ.ಜನರಲ್ಲಿ ಭೀತಿ ಹುಟ್ಟಿಸಿ ನಾಯಕರಾಗಿದ್ದಾರೆ.ಕೋತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೇನೆ ಇರುತ್ತವೆ. ಬೀದಿ ರೌಡಿಗಳಿಗೆ, ಬಿಟ್ ಕಾಯಿನ್ ಆಸಾಮಿಗಳಿಗೆ ಮಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರಿವಿಗೆ ಬೀದಿ ಗೂಂಡಾಗಳೇ ಶಿಷ್ಯರು ಅಂತಲೇ ಸರಣಿ ಟ್ವಿಟ್ ಮೂಲಕ ಬಿಜೆಪಿ ಚುಚ್ಚಿದೆ.
ಪಬ್‌ನಲ್ಲಿ ಸಿಕ್ಕವರ ಮೇಲೆ ಬಾಟಲಿಯಿಂದ ಹಲ್ಲೆ ಮಾಡ್ತಿದ್ದ ರೌಡಿ ನಲಪಾಡ ಯುವ ಕಾಂಗ್ರೆಸ್ ಅಧ್ಯಕ್ಷ. ಗೊರಿಲ್ಲಾ ಶ್ರೀನಿವಾಸ್ ರಾಷ್ಟ್ರೀಯ ಅಧ್ಯಕ್ಷ. ಇವರೆಲ್ಲ ಗೂಂಡಾಗಿರಿಯ ತುಣುಕುಗಳೇ ಎಂದು ಬಿಜೆಪಿ ಎಲ್ಲರ ಜನ್ಮಜಾಲಾಡಿ ಬಿಟ್ಟಿದೆ.
PublicNext
16/06/2022 03:12 pm