ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ವಿಧಾನ ಪರಿಷತ್ ನಲ್ಲಿ ಬಹುಮತ ಸಾಧಿಸುವಲ್ಲಿ ಸಕ್ಸಸ್ ಆಗಿದೆ. 4 ಸ್ಥಾನದ ಫಲಿತಾಂಶ ಈಗ ಪಕ್ಷದ ಸ್ಥಾನವನ್ನ ಗಟ್ಟಿಗೊಳಿಸಿದೆ. ಪಶ್ಚಿಮ ಶಿಕ್ಷಕರ ಮತ್ತು ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಗೆದ್ದು ಬೀಗಿದೆ.
ಸದ್ಯದ ಲೆಕ್ಕಾಚಾರದ ಪ್ರಕಾರ, ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೇರಿ ಸದಸ್ಯ ಬಲ 39ಕ್ಕೆ ಏರಿಕೆ ಆಗಿದೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬೆಂಬಲ ಸೇರಿದರೆ 40 ಆಗಲಿದೆ.
ಪರಿಷತ್‌ನ ಒಟ್ಟು ಸದಸ್ಯ ಸಂಖ್ಯೆ 75 ಇದೆ. ಬಹುಮತಕ್ಕೆ ಕೇವಲ 38 ಸದಸ್ಯ ಬಲ ಅವಶ್ಯ ಇದೆ. ಅಲ್ಲಿಗೆ ನಿರೀಕ್ಷೆಯಂತೆ ಬಿಜೆಪಿ ಈಗ ಗುರಿ ಮುಟ್ಟಿ ಆಗಿದೆ. ಈ ಮೂಲಕ ಮಸೂದೆಗಳು ನೀತಿ-ನಿರ್ಧಾರಗಳಿಗೆ ಅಂಗೀಕಾರದ ಮಾರ್ಗ ಸುಲಭವಾಗಿದೆ.
PublicNext
16/06/2022 07:43 am